ಮೇಡ್ ಇನ್ ಇಂಡಿಯಾ ವೋಕ್ಸ್‌ವ್ಯಾಗನ್ ವರ್ಟಸ್‌ಗೆ, ಲ್ಯಾಟಿನ್ NCAP 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಈ ಕಾರು ಸೇಫ್ಟಿ ಟೆಸ್ಟ್‌ನಲ್ಲಿ ಶೇ.92ರಷ್ಟು ಅಂಕ ಗಳಿಸಿದೆ. ಕ್ರ್ಯಾಶ್ ಪರೀಕ್ಷೆಗಳಲ್ಲಿ ಪಾಸ್ ಆಗಿದೆ. ಹಾಗಾಗಿ ವೋಕ್ಸ್‌ವ್ಯಾಗನ್ ವರ್ಟಸ್ ಚಾಲಕ ಮತ್ತು ಪ್ರಯಾಣಿಕರಿಗೆ ಸುರಕ್ಷಿತ ಅನ್ನೋದು ದೃಢಪಟ್ಟಿದೆ. ಈ ಸೆಡಾನ್‌ನ ಬಾಡಿಶೆಲ್ ಸ್ಥಿರವಾಗಿದೆ ಎಂದು ಹೇಳಲಾಗುತ್ತದೆ. ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ಕೂಡ ಈ ಕಾರು ಉತ್ತಮ ಪ್ರದರ್ಶನ ನೀಡಿದೆ. ಆದರೆ ಸೈಡ್ ಪೋಲ್ ಪ್ರಭಾವದಲ್ಲಿ ಎದೆಯ ರಕ್ಷಣೆಯನ್ನು ಕನಿಷ್ಠ ಎಂದು ರೇಟ್ ಮಾಡಲಾಗಿದೆ.
Volkswagen Virtus ಪಾದಚಾರಿ ರಕ್ಷಣೆಯಲ್ಲಿ 25.48 ಅಂಕಗಳನ್ನು ಮತ್ತು ಸುರಕ್ಷತೆ ಸಹಾಯದಲ್ಲಿ 36.54 ಅಂಕಗಳನ್ನು ಗಳಿಸಿದೆ. ಪರೀಕ್ಷಿತ ಮಾದರಿಯು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲ್ಲಾ ಆಸನ ಸ್ಥಾನಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಸಿಸ್ಟ್ ಸಿಸ್ಟಮ್ ಅನ್ನು ಹೊಂದಿತ್ತು. ಭಾರತದಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.0L, 3-ಸಿಲಿಂಡರ್ TSI ಟರ್ಬೊ-ಪೆಟ್ರೋಲ್ ಮತ್ತು 1.5L, 4-ಸಿಲಿಂಡರ್ TSI ಪೆಟ್ರೋಲ್.
6 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಟಾರ್ಕ್ ಪರಿವರ್ತಕ, 7-ಸ್ಪೀಡ್ ಡ್ಯುಯಲ್-ಕ್ಲಚ್ ಇವೆಲ್ಲವೂ ಈ ಕಾರಿನ ವಿಶೇಷತೆ. Volkswagen Virtus ನಾಲ್ಕು ಬಗೆಯಲ್ಲಿ ಲಭ್ಯವಿದೆ. Comforline, Highline, Topline ಮತ್ತು GT Plus. ಇದರ ಬೆಲೆ 11.32 ಲಕ್ಷ ರೂಪಾಯಿಗಳಿಂದ ಆರಂಭವಾಗಿ 18.42 ಲಕ್ಷ ರೂಪಾಯಿವರೆಗೂ ಇದೆ. ಮೂರು ಸ್ವಯಂಚಾಲಿತ ರೂಪಾಂತರಗಳಿವೆ – ಹೈಲೈನ್ ಎಟಿ, ಟಾಪ್‌ಲೈನ್ ಎಟಿ ಮತ್ತು ಜಿಟಿ ಪ್ಲಸ್. ಇವುಗಳ ಬೆಲೆ ಕ್ರಮವಾಗಿ 14.48 ಲಕ್ಷ, ರೂ 16 ಲಕ್ಷ ಮತ್ತು ರೂ 18.42 ಲಕ್ಷ ರೂಪಾಯಿ.