ಅದೆಷ್ಟೋ ಬಾರಿ ಬೇರೆಯವರ ಕಷ್ಟ, ಸಂಕಷ್ಟಗಳಿಗೆ, ಸ್ಪಂದಿಸುವ, ಮಿಡಿಯುವ ಪುಟ್ಟಮಕ್ಕಳ ಹೃದಯ ದೊಡ್ದವರಿಗಿಲ್ಲವಲ್ಲ ಎಂದೆನಿಸದೇ ಇರದು. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಹೃದಯಸ್ಪರ್ಶಿ ವಿಡಿಯೋದಲ್ಲಿನ ಸಂದರ್ಭವನ್ನು ಕೇವಲ ಪದಗಳಲ್ಲಿ ಹೇಳಲಾಗದು.
ಯಾವುದೇ ಸಂಭಾಷಣೆ, ಪದಪುಂಜಗಳು ಇರದ ಈ ದೃಶ್ಯವನ್ನು ಅರೆನಿಮಿಷ ಗಮನವಿಟ್ಟು ನೋಡಿದರೆ ಸಾಕು…… ಮುಗ್ಧ ಮಗುವಿನ ಮಾನವೀಯ ಗುಣ ಎಲ್ಲರನ್ನೂ ಬೆರಗಾಗುವಂತೆ ಮಾಡುತ್ತೆ.
ಸಂಭಾಷಣೆಯೇ ಇಲ್ಲದ 2 ನಿಮಿಷಕ್ಕಿಂತಲು ಕಡಿಮೆ ಅವಧಿಯ ಟರ್ಕಿಶ್ ಸಿನಿಮಾದ ಈ ವಿಡಿಯೋ ಪ್ರಪಂಚಕ್ಕೆ ಅರ್ಥಪೂರ್ಣ ಸಂದೇಶವನ್ನು ನೀಡಿದೆ.