ಕೋಲಾರ: ಇತ್ತೀಚಿಗೆ ಕೆಎಂಎಫ್ ಹಾಲಿನ ಮಾರಾಟ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾಲು ಖರೀದಿ ದರ 2 ರೂ. ಹೆಚ್ಚಳ ಮಾಡಿದೆ.
ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು, ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸಲು ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿ ಮಾರಾಟ ದರದ 2 ರೂ. ಗಳನ್ನು ಹಾಲು ಉತ್ಪಾದಕರಿಗೆ ನೀಡಲು ನಿರ್ಧಾರ ಕೈಗೊಂಡಿದೆ.
ಕೋಲಾರ ಹಾಲು ಒಕ್ಕೂಟದಿಂದ ನವೆಂಬರ್ 16ರಂದು ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು 2 ರೂ. ಹೆಚ್ಚಿಸಲಾಗಿತ್ತು. ಈಗ ಸರ್ಕಾರ ಮಾರಾಟ ದರ ಹೆಚ್ಚಳ ಮಾಡಿದ 2 ರೂ.ಗಳನ್ನು ರೈತರಿಗೆ ನೇರವಾಗಿ ನೀಡಲು ಮುಂದಾಗಿದೆ. ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ಕೋಲಾರ ಜಿಲ್ಲಾ ಹಾಲು ಒಕ್ಕೂಟ ಹೆಚ್ಚಿನ ದರ ನೀಡುತ್ತಿರುವ ಒಕ್ಕೂಟವಾಗಿದೆ.