ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಭೇಟಿಯಾದ ನಂತರ ಅನುಭವಿಸುವ ಸಂಪೂರ್ಣ ಸಂತೋಷವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್-ಸ್ವಿಜರ್ಲೆಂಡ್ ಪಂದ್ಯದ ಸಮಯದಲ್ಲಿ ಹಲವಾರು ಫುಟ್‌ಬಾಲ್ ಅಭಿಮಾನಿಗಳು ಇದೇ ರೀತಿಯ ಭಾವನೆಯನ್ನು ಅನುಭವಿಸಿದರು.
ಈ ಪಂದ್ಯದ ವೇಳೆ ಬ್ರೆಜಿಲಿಯನ್ ಫುಟ್‌ಬಾಲ್ ಆಟಗಾರ ನೇಮಾರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಕ್ರೀಡಾಂಗಣದಲ್ಲಿ ಕಂಡುಬಂದ. ಸೋಸಿಯಾ ಡೋನಿ ಎಂಬ ಹೆಸರಿನ ಈ ವ್ಯಕ್ತಿಯನ್ನು ನೋಡಿದ ನೇಮಾರ್ ಅಭಿಮಾನಿಗಳು ಪಟ್ಟ ಸಂತೋಷ ಅಷ್ಟಿಷ್ಟಲ್ಲ.
ನಿಜವಾಗಿಯೂ ನೇಮಾರ್ನೇ ಎಂದುಕೊಂಡ ಹಲವು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಕೆಲವರಿಗೆ ಈತ ನೇಮಾರ್ ಅಲ್ಲ ಎಂದು ತಿಳಿದಿದ್ದರೂ, ತಮ್ಮ ಸ್ನೇಹಿತರಿಗೆ ತೋರಿಸುವುದಕ್ಕಾಗಿ ಸೆಲ್ಫಿ ತೆಗೆದುಕೊಳ್ಳಲು ದೌಡಾಯಿಸಿದರು. ಇದರ ವಿಡಿಯೋ ವೈರಲ್ ಆಗಿದೆ.
ಡೊನಿ ಎಂಬಾತ ಇದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದು ಇದಾಗಲೇ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.
ಅದೇ ಇನ್ನೊಂದೆಡೆ, ನೇಮಾರ್, ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದು, ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.