ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ ವಿಷಯವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿದೆ.
ಆರಂಭಿಕ ಆಟದ ಅಂತ್ಯದ ನಂತರ ಜಪಾನಿನ ಪ್ರೇಕ್ಷಕರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದು ತಮ್ಮನ್ನು ತುಂಬಾ ಇಂಪ್ರೆಸ್ ಮಾಡಿತು ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.
ಪಂದ್ಯದ ನಂತರ ಜಪಾನಿನ ಪ್ರೇಕ್ಷಕರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಒಂದನ್ನು ಬಹ್ರೇನ್ ಕಂಟೆಂಟ್ ಕ್ರಿಯೇಟರ್ ಒಮರ್ ಫಾರೂಕ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದನ್ನು ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡಿದ್ದಾರೆ.
ಪಂದ್ಯದ ಬಳಿಕ ಕ್ರೀಡಾಂಗಣವು ಆಹಾರ ಪೊಟ್ಟಣಗಳು, ಪ್ಲಾಸ್ಟಿಕ್‌ಗಳು, ಗಾಜುಗಳು ಮತ್ತು ಬಾಟಲಿಗಳಿಂದ ಹೇಗೆ ತುಂಬಿದೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇವರು ಹೇಗೆ ಯಾವುದೇ ಅಳುಕು ಇಲ್ಲವೇ ಇವುಗಳನ್ನು ಕ್ಲೀನ್ ಮಾಡುತ್ತಿದ್ದಾರೆ ಎನ್ನುವುದು ತುಂಬಾ ಸಂತೋಷದ ವಿಷಯ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.