ಕೆಲವೊಂದು ರಾಷ್ಟ್ರಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧದ ಕಾನೂನಿದೆ. ಆದರೆ ಕತಾರ್ನಲ್ಲಿ ಫಿಪಾ ವಲ್ಡ್ ವಿಚಾರವಾಗಿ ಈ ಈ ಮೊದಲು ಕುತೂಹಲದ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಅದೇನೆಂದರೆ, ಫುಟ್ಬಾಲ್ ಪಂದ್ಯ ನೋಡುವ ವೀಕ್ಷಕರಿಗೆ ಅಂದರೆ ಟಿಕೆಟ್ ಖರೀದಿಸಿ ಪಂದ್ಯ ನೋಡುಗರು ಆಟ ಪ್ರಾರಂಭಕ್ಕೂ 3 ಗಂಟೆಯ ಮೊದಲು ಮತ್ತು ಒಂದು ಗಂಟೆಯ ಒಳಗೆ ಬಿಯರ್ ಖರೀದಿಸಬಹುದಾಗಿದೆ ಎಂಬುದು. ಆದರೆ ಫಿಫಾ ಪಂದ್ಯಾಟ ಪ್ರಾರಂಭವಾದ ಮೇಲೆ ಬಿಯರ್ ಖರೀದಿಸಲು ಮತ್ತು ಸೇವಿಸಲು ಅನುಮತಿ ನೀಡಿರಲಿಲ್ಲ.
ಬಿಯರ್ ಸೇವನೆ ಮಾಡಲು ಕಾದುಕುಳಿತಿದ್ದ ಮದ್ಯ ಪ್ರಿಯರಿಗೆ ಶಾಕಿಂಗ್ ಎನ್ನುವಂಥ ಪ್ರಕರಣ ಭಾನುವಾರದ ಉದ್ಘಾಟನಾ ಸಮಾರಂಭಕ್ಕೆ 48 ಗಂಟೆಗಳ ಮೊದಲು ಬಂದಿದೆ. ಅದೇನೆಂದರೆ ಕ್ರೀಡಾಂಗಣದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂಬುದು.ಇದು ಫುಟ್ಬಾಲ್ ಅಭಿಮಾನಿಗಳನ್ನು ಕೆರಳಿಸಿದೆ.
ಇದು ಫುಟ್ಬಾಲ್ ಅಭಿಮಾನಿಗಳನ್ನು ಕೆರಳಿಸಿದೆ. ಫುಟ್ಬಾಲ್ ವೀಕ್ಷಣೆಗೆ ಬಂದ ಜನರು ತಮಗೆ ಬಿಯರ್ ಬೇಕು ಎಂದು ಒಕ್ಕೊರಲಿನಿಂದ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ. ರೆಡ್ಡಿಟ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೊದಲು ಆಮಿಷ ಒಡ್ಡಿ ಟಿಕೆಟ್ ಖರೀದಿ ಮಾಡಿದ ಮೇಲೆ ಹೀಗೆ ಯೂಟರ್ನ್ ಹೊಡೆದಿರುವುದು ಸರಿಯಲ್ಲ ಎಂದು ಭಾರಿ ಗಲಾಟೆ ಶುರು ಮಾಡಿದ್ದಾರೆ ಅಭಿಮಾನಿಗಳು.