ಬೆಂಗಳೂರು: ಸಾಮಾನ್ಯವಾಗಿ ಹಲವರಲ್ಲಿ ಕಾಲಿನ ಊತ ಸಮಸ್ಯೆ ಕಂಡುಬರುತ್ತದೆ. ಕಾಲಿನ ಊತಕ್ಕೂ ಬಿಪಿಗೂ ಏನಾದರೂ ಸಂಬಂಧವಿದೆಯೇ ? ಬಿಪಿ ಹೆಚ್ಚಾದರೆ ಕಾಲಿನಲ್ಲಿ ಊತ ಕಂಡುಬರುತ್ತದೆಯೇ ? ಕಾಲಿನ ಊತ ಕಡಿಮೆ ಮಾಡಲು ಸುಲಭವಾದ ಪರಿಹಾರವೇನು ? ಯಾವೆಲ್ಲ ಕಾರಣಕ್ಕೆ ಕಾಲಿನಲ್ಲಿ ಊತ ಕಂಡುಬರುತ್ತದೆ ಎಂಬ ಹಲವಾರು ಪ್ರಶ್ನೆಗಳಿಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಹೃದಯಸಂಬಂಧಿ ಕಾಯಿಲೆಯಿದ್ದಾಗ ಅಥವಾ ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾದಾಗ, ಅತಿಯಾದ ಮದ್ಯಪಾನದಿಂದ ಲಿವರ್ ಸಮಸ್ಯೆಯಾದಾಗ, ಕಿಡ್ನಿ, ಆಹಾರದಲ್ಲಿ ಪ್ರೋಟಿನ್ ಅಂಶ ಕಡಿಮೆಯಾದಾಗ ಹೀಗೆ ಇನ್ನೂ ಅನೇಕ ಕಾರಣಕ್ಕೆ ಕಾಲಿನಲ್ಲಿ ಊತ ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ ? ಎಂಬ ಬಗ್ಗೆ ಡಾ. ರಾಜು ಮಹತ್ವದ ಸಲಹೆಯನ್ನು ನೀಡಿದ್ದಾರೆ. ಡಾ. ರಾಜು ಅವರ ಆರೋಗ್ಯ ಸಲಹೆ ಕುರಿತ ಹೊಸ ವಿಡಿಯೋ ನೀವೂ ನೋಡಿ ಅಭಿಪ್ರಾಯ ತಿಳಿಸಿ.