ಬ್ರಿಟನ್: ತಮಗೊಂದು ಕನಸಿನ ಮನೆ ಇರಲಿ ಎಂದು ಎಲ್ಲರೂ ಬಯಸುವುದು ಸಹಜ. ತಮ್ಮ ಮನೆ ಹೀಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ಮನೆ ಇದೀಗ ವೈರಲ್ ಆಗಿದೆ. ಈ ಮನೆಯ ವಿಶೇಷತೆ ಎಂದರೆ ಮಲಗುವ ಕೋಣೆಯಲ್ಲಿ ಶವರ್ ಇದೆ !
ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮೂರು ಬೆಡ್‌ರೂಮ್‌ಗಳ ಮನೆ ಇದಾಗಿದ್ದು, ವಿಚಿತ್ರವಾಗಿದೆ. ತಮಗೊಂದು ಮನೆ ಬೇಕು ಎಂದು ರೆಬೆಕಾ ಗ್ಲೋವರ್ ಎಂಬಾಕೆ ಆನ್ಲೈನ್ನಲ್ಲಿ ಹುಡುಕುತ್ತಿದ್ದಾಗ ಈ ಮನೆ ಗೋಚರಿಸಿದ್ದು, ಈಕೆಗೆ ಇದು ಇಷ್ಟವಾಗಿದೆಯಂತೆ.
ಐಷಾರಾಮಿ ಮೂರು ಬೆಡ್‌ರೂಮ್‌ಗಳ ಮನೆಯಾಗಿರುವ ಇದರ ಮಲಗುವ ಕೊಠಡಿಯಲ್ಲಿ ಶವರ್ ಇಟ್ಟಿರುವುದು ಏಕೆ ಎನ್ನುವುದೇ ವಿಚಿತ್ರವಾಗಿದೆ. ಬೆಡ್ರೂಮ್ಗಳಲ್ಲಿ ಅಟ್ಯಾಚ್ ಬಾತ್ರೂಮ್ ಇರುವುದು ಸಹಜ. ಅಲ್ಲಿ ಶವರ್ ಇರುವುದೂ ಸರ್ವೇ ಸಾಮಾನ್ಯ. ಆದರೆ ಈ ಮನೆಯ ಬೆಡ್ರೂಮ್ ಮಧ್ಯ ಭಾಗದಲ್ಲಿ ಶವರ್ ಇರುವುದು ವಿಲಕ್ಷಣವಾಗಿದೆ.
ಇದನ್ನು ಏಕೆ ಇಟ್ಟಿದ್ದಾರೆ ಎನ್ನುವುದು ತಿಳಿದಿಲ್ಲ. ಆದರೆ ಇದೊಂದು ರೀತಿಯಲ್ಲಿ ಕುತೂಹಲಕಾರಿಯಾಗಿದೆ ಎಂದಿರುವ ರೆಬೆಕಾ, ಮನೆಯನ್ನು £175,000 (ಸುಮಾರು 1.6 ಕೋಟಿ ರೂಪಾಯಿ) ಕೊಟ್ಟು ಖರೀದಿ ಮಾಡಿದ್ದಾರೆ.