ನ್ಯೂಯಾರ್ಕ್: ಅಮೆರಿಕದ ಹಾಸ್ಯನಟ ಮತ್ತು ಟಿವಿ ನಿರೂಪಕ ಜೇ ಲೆನೋ ಅವರ 115 ವರ್ಷ ಹಳೆಯದಾದ ಕಾರು ಲಾಸ್ ಏಂಜಲೀಸ್ ಗ್ಯಾರೇಜ್ನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಜೇ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅವರನ್ನು ಸ್ನೇಹಿತರೊಬ್ಬರು ರಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಲೆನೋ ಅವರು 1907 ರ ತಮ್ಮ ವೈಟ್ ಸ್ಟೀಮ್ ಕಾರನ್ನು ರಿಪೇರಿ ಮಾಡುತ್ತಿದ್ದಾಗ ಕಾರು ಸಿಡಿದಿದ್ದು, ಮುಖ ಮತ್ತು ಕೈ ಸುಟ್ಟುಹೋಗಿವೆ. ಅದೃಷ್ಟವಶಾತ್ ಅವರ ಕಣ್ಣುಗಳು ಮತ್ತು ಕಿವಿಗಳು ತೀವ್ರವಾಗಿ ಹಾನಿಗೊಳಗಾಗಲಿಲ್ಲ. ಅಲ್ಲಿಯೇ ಇದ್ದ ಇವರ ಸ್ನೇಹಿತ ಓಡಿಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
72 ವರ್ಷ ವಯಸ್ಸಿನ ಲೆನೋ ಅವರು ‘ಟುನೈಟ್ ಷೋ’ನಲ್ಲಿ ಭಾಗವಹಿಸಲು ಲಾಸ್ ವೇಗಾಸ್ಗೆ ತೆರಳಬೇಕಿತ್ತು. ಜತೆಗೆ ಹಣಕಾಸು ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ಆದರೆ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.