ಒಂದು ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ದಪ್ಪಗಿನ ಒಂದು ಲೀಟರ್ ಹಾಲು ಹಾಕಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಕೈಬಿಡದೆ ಮಗುಚುತ್ತಾ ಇರಿ. ಹಾಲು ಗಟ್ಟಿಯಾಗುವವರಗೆ ಕೈಯಾಡಿಸುತ್ತಾ ಇರಿ. ಹಾಲು ಖೋವಾ ಹದಕ್ಕೆ ಬರಲಿ. ಹಾಲು ಸೀದು ಹೋಗದಂತೆ ನೋಡಿಕೊಳ್ಳಿ. ಇದಕ್ಕೆ 1 ½ ಕಪ್ ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಟ್ಟುಕೊಂಡು ಕೈಯಾಡಿಸಿ.
ನೀರಿನಾಂಶ ಸಂಪೂರ್ಣವಾಗಿ ಹೋದ ಮೇಲೆ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ ಗ್ಯಾಸ್ ಆಫ್ ಮಾಡಿ. ನಂತರ ಇದು ತಣ್ಣಗಾಗುವುದಕ್ಕೆ ಬಿಟ್ಟು ಬಿಡಿ. ತಣ್ಣಗಾದ ನಂತರ ಗಟ್ಟಿಯಾಗುತ್ತದೆ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಮಗೆ ಯಾವ ಆಕಾರಕ್ಕೆ ಬೇಕೋ ಆ ಆಕಾರದಲ್ಲಿ ಪೇಡ ಮಾಡಿಕೊಳ್ಳಿ.