alex Certify ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ

ಶ್ವಾನಗಳು ಹಲವರ ಜೀವನದ ಅಂಗವಾಗಿವೆ. ಹೆಚ್ಚಿನವರು ಅದನ್ನು ತಮ್ಮ ಮನೆಯ ಮಕ್ಕಳಂತೆಯೇ ಸಾಕುತ್ತಾರೆ. ಇದು ಮನೆಯವರ ಮಾತಾದರೆ ಇನ್ನು ಪೊಲೀಸ್​, ಮಿಲಿಟರಿಗಳಲ್ಲಿ ನಾಯಿಗಳಿಗೆ ಇರುವಷ್ಟು ಮಹತ್ವ ಅಷ್ಟಿಷ್ಟಲ್ಲ. ಎಂಥದ್ದೇ ತರಬೇತು ನೀಡಿದರೂ ಅದರಂತೆಯೇ ಮಾಡುವ ತಾಕತ್ತು ನಾಯಿಗಳಿಗಿದೆ. ಅಂಥದ್ದೇ ಒಂದು ಕ್ಯೂಟ್​ ವಿಡಿಯೋ ಇದೀಗ ವೈರಲ್​ ಆಗಿದೆ.

ಸಿಐಎಸ್‌ಎಫ್‌ನ ಯೋಧನೊಬ್ಬನ ಜತೆ ನಾಯಿ ಯೋಗ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ‘ಡಿಫೆಂಡರ್ಸ್ ಆಫ್ ಭಾರತ್’ ಪುಟವು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್​ ಮಾಡಿದೆ.

ಸಿಐಎಸ್‌ಎಫ್‌ ಯೋಧ ಮೆಟ್ರೋ ನಿಲ್ದಾಣದಲ್ಲಿ ತರಬೇತಿ ನೀಡುತ್ತಿದ್ದು, ತರಬೇತಿ ನೀಡಿದಂತೆಯೇ ನಾಯಿ ಯೋಗ ಪ್ರದರ್ಶನ ಮಾಡುತ್ತಿರುವುದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಅಸಾಧಾರಣ ಎನ್ನುವ ಯೋಗವನ್ನು ನಾಯಿ ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಈ ವಿಡಿಯೋ ಇದಾಗಲೇ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಮತ್ತು ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...