ಕೃತಕ ಬುದ್ಧಿಮತ್ತೆಯ ಮೂಲಕ ಹಲವಾರು ರೀತಿಯ ತಂತ್ರಗಳನ್ನು ಮಾಡುತ್ತಿರುವುದು ಈಗಿನ ಟ್ರೆಂಡ್. ಇದೀಗ ನಮ್ಮ ಜೀವನದ ಭಾಗವೇ ಆಗಿ ಹೋಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಅಸಾಧ್ಯವಾದದ್ದು ಯಾವುದೂ ಇಲ್ಲ ಎನ್ನುವಂಥ ತಂತ್ರಗಳು ರೂಪು ಪಡೆಯುತ್ತಿದ್ದು, ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಇಂದು, ಪ್ರಪಂಚದಾದ್ಯಂತ ಎಂಜಿನಿಯರ್‌ಗಳು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಸಹಾಯದಿಂದ ಜನರಿಗೆ ಸ್ಮಾರ್ಟ್ ಪರಿಹಾರಗಳನ್ನು ಒದಗಿಸುತ್ತಿದ್ದಾರೆ. ಈ ಸ್ಮಾರ್ಟ್ ತಂತ್ರಜ್ಞಾನದ ಒಂದು ಕುತೂಹಲಕಾರಿ ಸೃಷ್ಟಿಯೊಂದೀಗ ಭಾರಿ ವೈರಲ್ ಆಗಿದೆ.
ಇದು ಸ್ಮಾರ್ಟ್ ಸ್ಪ್ರಿಂಕ್ಲರ್‌ಗಳಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಬೆಂಕಿಯನ್ನು ನಂದಿಸಲು ರಚಿಸಲಾಗಿದೆ. ಇದರ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. 51 ಸೆಕೆಂಡ್‌ಗಳ ವಿಡಿಯೋದಲ್ಲಿ ಕಾರ್ಡ್‌ಬೋರ್ಡ್ ಮತ್ತು ಮರವನ್ನು ಬಳಸಿ ಈ ತಂತ್ರಜ್ಞಾನ ರೂಪಿಸಿರುವುದನ್ನು ನೋಡಬಹುದು.
ಸ್ಮಾರ್ಟ್ ಸ್ಪ್ರಿಂಕ್ಲರ್ ಅನ್ನು ದೂರದಲ್ಲಿ ಇರಿಸಲಾಗುತ್ತದೆ ಮತ್ತು ಅದನ್ನು ಚಾವಣಿಗೆ ಜೋಡಿಸಲಾಗುತ್ತದೆ, ನಿಧಾನವಾಗಿ ಇದು ತಿರುಗಲು ಪ್ರಾರಂಭಿಸುತ್ತದೆ, ಯಾವ ಜಾಗದಲ್ಲಿ ಬೆಂಕಿ ಬಿದ್ದಿದೆ ಎಂದು ತಾನೇ ಗುರುತಿಸಿ, ತಕ್ಷಣ ಬೆಂಕಿಯನ್ನು ನಿಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ 33 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
https://twitter.com/kiwonka/status/1577259989814501376?ref_src=twsrc%5Etfw%7Ctwcamp%5Etweetembed%7Ctwterm%5E1577259989814501376%7Ctwgr%5Ec59ae6b413b0ae99cb6577f70c17fb29f77ee1e2%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-this-ai-powered-sprinkler-aims-and-extinguishes-fire-netizens-are-impressed-6351391.html