ಟಿ.ವಿ ಧಾರಾವಾಹಿಗಳು ಇಂದಿನ ಹೆಚ್ಚಿನ ಜನರ ಅದರಲ್ಲಿಯೂ ಮಹಿಳೆಯರ ಅವಿಭಾಜ್ಯ ಅಂಗವಾಗಿದೆ. ದಿನಪೂರ್ತಿ ಧಾರಾವಾಹಿಗಳನ್ನು ಬಯ್ಯುತ್ತಲೇ ಒಂದು ದಿನವೂ ಮಿಸ್ ಮಾಡಿಕೊಳ್ಳುವುದಿಲ್ಲ. 8-10 ವರ್ಷ ಎಳೆಯುತ್ತಲೇ ಧಾರಾವಾಹಿ ಸಾಗಿದರೂ, ಅದರಲ್ಲಿರುವ ಕಲಾವಿದರು ಬದಲಾದರೂ ಧಾರಾವಾಹಿ ಮಾತ್ರ ಮುಗಿಯುವುದಿಲ್ಲ.ಆದರೆ ವೀಕ್ಷಕರು ಹೆಚ್ಚಿದಂತೆ ಧಾರಾವಾಹಿಯನ್ನು ನಿರ್ದೇಶಕರು ಎಳೆಯುತ್ತಾ ಹೋಗುತ್ತಾರೆ. ಜನರಿಗೆ ಹೆಚ್ಚು ಇಷ್ಟವಾಗುವಂತೆ ಮಾಡಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ.
ಅಂಥದ್ದೇ ಒಂದು ಧಾರಾವಾಹಿಯ ದೃಶ್ಯವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ನಿಜ ಜೀವನದಿಂದ ದೂರವಾದ, ಕಪೋಕಲ್ಪಿತ ದೃಶ್ಯವೊಂದು ಇದಾಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಿದೆ. ಆದರೆ ಧಾರಾವಾಹಿ ಪ್ರಿಯರು ಮಾತ್ರ ಇದನ್ನು ನಿಜಜೀವನದ ಭಾಗವೇ ಎಂಬಂತೆ ನೋಡುತ್ತಿದ್ದಾರೆ.
ಅಷ್ಟಕ್ಕೂ ಟ್ರೋಲ್ ಆಗಿರುವ ಈ ಧಾರಾವಾಹಿ ತುಣುಕು ಏನೆಂದರೆ ಇದರಲ್ಲಿ ಪಾತ್ರಧಾರಿಯೊಬ್ಬಳಿಗೆ ಅಪಘಾತವಾಗಿರುತ್ತದೆ. ಅವರ ಮುಖವೆಲ್ಲಾ ರಕ್ತಸಿಕ್ತವಾಗಿರುತ್ತದೆ. ಅವಳು ಮೃತಪಡುತ್ತಾಳೆ. ಆಂಬುಲೆನ್ಸ್ನಿಂದ ಅವಳ ಮೃತದೇಹವನ್ನು ದಾರಿಯ ಮಧ್ಯೆ ಹಾಕುತ್ತಾರೆ. ಇತ್ತ ವಿಲನ್ಗಳ ಕಾರ್ಯಾಚರಣೆ ಶುರು. ಸತ್ತಿರುವುದು ಬೇರೆ ಯಾರೋ ಎಂದು ತಿಳಿಸುವ ಸಲುವಾಗಿ ಬೇರೊಬ್ಬಳ ಮುಖವಾಡವನ್ನು ತಂದು ಆಕೆಯ ಶವಕ್ಕೆ ಅಂಟಿಸಲಾಗುತ್ತದೆ. ಆಗ ಆಕೆ ಅದೇ ಧಾರಾವಾಹಿಯ ಬೇರೊಬ್ಬ ಪಾತ್ರಧಾರಿಯ ಶವ ಎಂದು ನಂಬಿಸುವುದು ಅವರ ಉದ್ದೇಶ.
ರಸ್ತೆ ಮಧ್ಯೆಯಲ್ಲಿಯೇ ನಡೆಯಿತು ಪ್ಲಾಸ್ಟಿಕ್ ಸರ್ಜರಿ ಎಂದು ಶೀರ್ಷಿಕೆ ನೀಡಿ ಭಾರಿ ತಮಾಷೆಯ ಬ್ಯಾಕ್ಗ್ರೌಂಡ್ ಹಾಕಿ ಈ ವಿಡಿಯೋ ವೈರಲ್ ಆಗಿದ್ದು, ಎಷ್ಟು ಅಸಹಜ ಎನಿಸುವ ಸನ್ನಿವೇಶಗಳನ್ನು ಧಾರಾವಾಹಿಗಳಲ್ಲಿ ಸೃಷ್ಟಿಸಲಾಗುತ್ತಿದೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
https://twitter.com/HasnaZarooriHai/status/1588391420469030913?ref_src=twsrc%5Etfw%7Ctwcamp%5Etweetembed%7Ctwterm%5E1588391420469030913%7Ctwgr%5Eb49974dbec8286c896708d9639e59813549268b4%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-scene-from-tv-serial-shows-woman-performing-instant-plastic-surgery-internet-is-in-splits-2294125-2022-11-07