ಪ್ರತಿನಿತ್ಯ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರು ಶಾಕ್ ಆಗುವಂಥ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಕೆಲವು ರೈಲಿನಲ್ಲಿ ಚಹ ತಯಾರಿಸುವ ಜಾಗ, ಅವರು ಬಳಸುವ ನೀರಿನ ಬಗ್ಗೆ ಇದಾಗಲೇ ಕೆಲವು ವಿಡಿಯೋಗಳು ಬಂದಿದ್ದರೂ ಈಗ ವಿಭಿನ್ನ ರೀತಿಯ ವಿಡಿಯೋ ಒಂದು ವೈರಲ್ ಆಗಿದೆ.
ರೈಲಿನಲ್ಲಿ ಅಶುದ್ಧ ನೀರಿಗೆ ಅಶುಚಿ ಕಬ್ಬಿಣದ ರಾಡ್ ಬಳಸಿ ವ್ಯಕ್ತಿಯೊಬ್ಬ ಟೀ ಬಿಸಿ ಮಾಡುತ್ತಿರುವ ವಿಡಿಯೋ ಇದಾಗಿದೆ. ನೀರು ಕುದಿಸಲು ಅಶುಚಿಯಾದ ಕಬ್ಬಿಣದ ರಾಡ್ ಬಳಸಿ ಟೀ ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
ರೈಲು ಶಬರಿ ಎಕ್ಸ್‌ಪ್ರೆಸ್ ಎಂದು ಶೀರ್ಷಿಕೆ ನಿಡಲಾಗಿದೆ. ವಿಡಿಯೋ ರೆಕಾರ್ಡ್ ಮಾಡುತ್ತಿರುವ ಪ್ರಯಾಣಿಕರು ಭಾರತೀಯ ರೈಲ್ವೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ಇದುವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ರೈಲಿನಲ್ಲಿ ಮಾರಾಟಗಾರರು ಅಶುಚಿಯಾದ ಅಭ್ಯಾಸಗಳನ್ನು ಅನುಸರಿಸುವುದನ್ನು ನೋಡುತ್ತಿರುವುದು ಇದೇ ಮೊದಲಲ್ಲ ಎಂದು ಹಲವರು ಹೇಳಿದ್ದಾರೆ. ಆಹಾರಗಳನ್ನು ಪಾರ್ಸೆಲ್ ಮಾಡುವ ವಿಧಾನದ ಬಗ್ಗೆಯೂ ಕಮೆಂಟ್ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.