alex Certify ಬೆಂಗಳೂರಿನ ಈ ಸ್ಪೆಷಲ್ ಆಟೋದಲ್ಲಿ ಏನುಂಟು ಏನಿಲ್ಲ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಈ ಸ್ಪೆಷಲ್ ಆಟೋದಲ್ಲಿ ಏನುಂಟು ಏನಿಲ್ಲ ಗೊತ್ತಾ..?

ಎಲ್ಲಿಗಾದರೂ ಅರ್ಜೆಂಟ್ ಆಗಿ ಹೋಗ್ಬೇಕಂದ್ರೆ ನಮಗೆ ಮೊದಲು ನೆನಪಾಗೊದೇ ಆಟೋ. ಆದರೆ ಆಟೋದಲ್ಲಿ ಮೀಟರ್ ಇದ್ದರೂ ಡ್ರೈವರ್ ಡಬಲ್ ರೇಟ್ ಹಾಕಿದ್ರೆ, ಹೇಳಿದ ಕಡೆಗೆ ಬರೋದಕ್ಕೆ ಒಪ್ಪದಿದ್ದಾಗ ಹಾಕದಿರೋ ಶಾಪವೇ ಇಲ್ಲ. ಆದರೆ ಬೆಂಗಳೂರಿನ ಈ ಒಂದು ಆಟೋ ಹತ್ತಿದ್ರೆ ಸಾಕು ಎಂಥವರು ಕೂಡಾ ಖುಷಿಯಾಗಿ ಬಿಡ್ತಾರೆ.

ಹೌದು, ಕೆಲ ಆಟೋ ಚಾಲಕರು ತಮ್ಮ ಆಟೋದಲ್ಲಿ ಕುಳಿತ ಪ್ರಯಾಣಿಕರು ನೆಮ್ಮದಿಯಾಗಿ ಪ್ರಯಾಣಿಸಲಿ ಎಂದು ಅವರಿಗಂತಾನೇ ಕೆಲ ವಿಶೇಷ ಸೌಲಭ್ಯಗಳನ್ನ ಅಳವಡಿಸಿಕೊಂಡಿರುತ್ತಾರೆ. ಅಂತಹ ಸ್ಪೆಷಲ್ ಆಟೋದಲ್ಲಿ ಬೆಂಗಳೂರಿನ ಈ ಆಟೋ ಕೂಡಾ ಒಂದು.

ಉತ್ತಮ್ ಕಶ್ಯಪ್ ಅನ್ನುವವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಪೆಷಲ್ ಆಟೋ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಇವರು ಶೀರ್ಷಿಕೆಯಲ್ಲಿ ‘ ಇವರೇ ಬೆಂಗಳೂರಿನ ಈ ಆಟೋ ಮಾಲೀಕರು. ರಾಜೇಶ್ ಈ ಆಟೋದಲ್ಲಿ ಪ್ರಯಾಣಿಸೋ ಜನರಿಗಂತಾನೇ ಸ್ಯಾನಿಟೈಜರ್, ಬ್ಯಾಂಡ್ ಏಡ್, ಬಿಸ್ಕೆಟ್, ನೀರಿನ ಬಾಟಲ್‌, ಕೆಲ ಚಾಕಲೇಟ್ಗಳನ್ನ ಇಟ್ಟಿದ್ದಾರೆ. ರಾಜೇಶ್ ಅವರು ಜನರಿಗಾಗಿ ತಮ್ಮಿಂದಾದಷ್ಟು ಮಾಡುತ್ತಿರೋ ಪ್ರಯತ್ನ ಅದ್ಭುತʼ ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಈ ಪೋಸ್ಟ್ಗೆ ಲೈಕ್ ಬಂದಿದೆ. ಆಟೋ ಮಾಲೀಕರ ಈ ಐಡಿಯಾ ನೋಡಿ ನೆಟ್ಟಿಗರು ಭೇಷ್ ಅಂತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...