ಕಾಲ ಬದಲಾದಂತೆ ಯುವಕರು, ಯುವತಿಯರ ಆಲೋಚನೆಗಳು ಬದಲಾಗಿವೆ. ಹಿಂದೆಲ್ಲಾ ಹಿರಿಯರು ತೀರ್ಮಾನಿಸಿ ಮದುವೆ ಮಾಡುತ್ತಿದ್ದರು.
ಈಗ ಅನೇಕ ಹಿರಿಯರು ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸದಿದ್ದರೆ ಕೆಲವೊಮ್ಮೆ ಜೀವನವಿಡಿ ಪರಿತಪಿಸಬೇಕಾಗುತ್ತದೆ.
ಇಂಥವನು ನನ್ನ ಗಂಡನಾಗಲಿ, ಇಂಥವಳು ನನ್ನ ಪತ್ನಿಯಾಗಲಿ ಎಂದು ಮೊದಲ ನೋಟದಲ್ಲಿ ಅನ್ನಿಸಿದರೂ, ನಿಮ್ಮ ಸಂಗಾತಿಯಾಗಲಿರುವವರ ಬಗ್ಗೆ ನೀವು ಮೊದಲು ತಿಳಿದುಕೊಳ್ಳಬೇಕು.
ಅನುಮಾನದಿಂದ ಪ್ರಶ್ನಿಸದೇ ಆತನ, ಅವಳ ಪೂರ್ವಪರ, ಆಸೆ, ಆಕಾಂಕ್ಷೆ, ಹವ್ಯಾಸಗಳ ಬಗ್ಗೆ ತಿಳಿಯಬೇಕು. ನಿಮ್ಮ ಅಭಿಪ್ರಾಯಗಳನ್ನು ಗೌರವಿಸುವಂತಿರಬೇಕು. ನಿಮ್ಮ ಕಷ್ಟ, ಸುಖಗಳಲ್ಲಿ ಜೊತೆಯಾಗಬೇಕು.
ಎಲ್ಲವನ್ನೂ ಅನುಮಾನದಿಂದ ನೋಡುವವರು, ಅಧಿಕಾರ ಚಲಾಯಿಸುವವರು ದಿನ ಕಳೆದಂತೆ ನಿಮಗೆ ಇಷ್ಟವಾಗದಿರಬಹುದು.
ಸಂಗಾತಿಗಳ ನಡುವೆ ನಂಬಿಕೆ, ವಿಶ್ವಾಸವಿದ್ದಲ್ಲಿ ಎಲ್ಲವನ್ನೂ ಸುಲಭವಾಗಿ ಎದುರಿಸಬಹುದು. ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಗೊತ್ತಿದ್ದರೆ, ಪೋಷಕರನ್ನು ಒಪ್ಪಿಸಬಹುದು.