ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು ಅಜ್ಜಿಯ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
90 ರ ದಶಕದ ಬಾಲಿವುಡ್ನ ಹಾಡೊಂದಕ್ಕೆ ವಯಸ್ಸಾದ ಮಹಿಳೆ ನರ್ತಿಸಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ. ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದ ಗೋವಿಂದ ಮತ್ತು ರವೀನಾ ಟಂಡನ್ರ ಕಿಸಿ ಡಿಸ್ಕೋ ಮೇ ಜಾಯೆ ಹಾಡಿಗೆ ಈ ವೃದ್ಧೆ ಹೆಜ್ಜೆ ಹಾಕಿದ್ದಾರೆ.
ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ವೃದ್ಧೆ ನೆಟ್ಟಿಗರ ಮನ ಗೆದ್ದಿದ್ದಾರೆ. ಕೆಲವರು ಮಾತ್ರ ಈ ವಯಸ್ಸಿನಲ್ಲಿ ಈ ಹಾಡಿಗೆ ನೃತ್ಯ ಏತಕ್ಕೆ ಎಂದು ಕಾಲೆಳೆದಿದ್ದರೆ, ಕೆಲವರು ಈ ವಯಸ್ಸಿನಲ್ಲಿಯೂ ಜೀವನ ಉತ್ಸಾಹವನ್ನು ನೋಡಿ ಕಲಿಯಬೇಕು ಎಂದು ಭೇಷ್ ಎಂದಿದ್ದಾರೆ.