alex Certify Watch: ಒಬ್ಬ ಬಿದ್ದನೆಂದು ಮಿಕ್ಕವರಿಂದಲೂ ಅನುಕರಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಒಬ್ಬ ಬಿದ್ದನೆಂದು ಮಿಕ್ಕವರಿಂದಲೂ ಅನುಕರಣೆ…!

“ಒಂದು ಕೊಳೆತ ಸೇಬು ಬ್ಯಾರೆಲ್ ಅನ್ನು ಹಾಳುಮಾಡುತ್ತದೆ” ಎಂದು ಹೇಳುವ ಬೆಂಜಮಿನ್ ಫ್ರಾಂಕ್ಲಿನ್ ಅವರ ಪ್ರಸಿದ್ಧ ಉಲ್ಲೇಖವನ್ನು ನೀವು ಕೇಳಿರಬಹುದು. ಈ ಮಾತಿಗೆ ಅನ್ವಯ ಆಗುವಂಥ ಘಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಸ್ತೆಯಲ್ಲಿ ವೇಗವಾಗಿ ಚಲಿಸುವ ಸೈಕ್ಲಿಸ್ಟ್‌ಗಳ ತಂಡವು ಚೈನ್ ರಿಯಾಕ್ಷನ್‌ನಲ್ಲಿ ಹೇಗೆ ಬೀಳುತ್ತದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಕೆಲವರು ಸೈಕಲ್ ಮ್ಯಾರಥಾನ್‌ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಮುಂದೆ ಇರುವಾತ ಬಾಟಲಿಯಲ್ಲಿ ನೀರು ಕುಡಿಯುತ್ತಾ ಸೈಕಲ್​ ಚಲಿಸುವಾಗ ಬಿದ್ದುಹೋಗಿದ್ದಾನೆ. ಇವನ ಹಿಂದೆ ಬರುತ್ತಿರುವವರೂ ಆಯತಪ್ಪಿ ಬಿದ್ದಿದ್ದಾರೆ.

ಇದರ ವಿಡಿಯೋಗೆ ಬಹಳ ಕಮೆಂಟ್ಸ್​ಗಳು ಬಂದಿವೆ. ಮುಂದೆ ಹೋಗುತ್ತಿದ್ದ ಸೈಕ್ಲಿಸ್ಟ್​ ಸ್ಟೈಲ್​ ಮಾಡಲು ಹೋಗಿ ಈ ರೀತಿ ಅನಾಹುತ ಆಗಿದೆ ಎಂದು ಹಲವರು ಕಿಡಿ ಕಾರುತ್ತಿದ್ದರೆ, ಟೀಂ ವರ್ಕ್​ ಎಂದರೇನು ಎಂಬುದನ್ನು ಇದು ತೋರಿಸುತ್ತಿದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

https://twitter.com/TheBest_Viral/status/1585035560661372930?ref_src=twsrc%5Etfw%7Ctwcamp%5Etweetembed%7Ctwterm%5E1585035560661372930%7Ctwgr%5Ee93a301be94dd6d797aa8ff50b6cf5eb723ccfba%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-cyclists-tumble-one-after-another-following-team-members-mistake-6253561.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...