ನೋಯ್ಡಾ (ಉತ್ತರ ಪ್ರದೇಶ): 10 ರೂಪಾಯಿ ಹಿಡಿದು 90 ರೂಪಾಯಿಗಳ ಬರ್ಗರ್ ತಿನ್ನಲು ಅಂಗಡಿಗೆ ಬಂದಿದ್ದ ಪುಟ್ಟ ಬಾಲೆಯೊಬ್ಬಳಿಗೆ ಬರ್ಗರ್ ನೀಡಿ ಔದಾರ್ಯ ಮರೆದ ಬರ್ಗರ್ ಕಿಂಗ್ನ ನೋಯ್ಡಾದ ಉದ್ಯೋಗಿಯೊಬ್ಬನಿಗೆ ಬರ್ಗರ್ ಕಿಂಗ್ ಸನ್ಮಾನಿಸಿದೆ.
ಪುಟ್ಟ ಹುಡುಗಿಯೊಬ್ಬಳು 10 ರೂಪಾಯಿ ಹಿಡಿದುಕೊಂಡು ತನಗೆ ಬರ್ಗರ್ ಬೇಕು ಎಂದು ಕೇಳಿದ್ದಳು. ಆದರೆ ಉದ್ಯೋಗಿ ಧೀರಜ್ ಶರ್ಮಾ, ಆಕೆಯನ್ನು ನೋಡಿ ಬರ್ಗರ್ ನೀಡಲಾಗದು ಎನ್ನದೇ ತಮ್ಮ ಜೇಬಿನಿಂದ 80 ರೂಪಾಯಿಗಳನ್ನು ಪಾವತಿಸಿ ಬಾಲಕಿಗೆ 90 ರೂಪಾಯಿಗಳ ಬರ್ಗರ್ ನೀಡಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಉದ್ಯೋಗಿಯ ಔದಾರ್ಯವನ್ನು ಮೆಚ್ಚಿ ಈ ಸನ್ಮಾನ ಮಾಡಲಾಗಿದೆ. ಈ ಕುರಿತು ಬರ್ಗರ್ ಕಿಂಗ್ ಟ್ವಿಟರ್ ಖಾತೆಯಲ್ಲಿ ಸನ್ಮಾನದ ಫೋಟೋ ಶೇರ್ ಮಾಡಿಕೊಂಡು ವಿಷಯವನ್ನು ತಿಳಿಸಿದೆ. ಉದ್ಯೋಗಿಯ ಔದಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.