ಬೆಳಗಾವಿ: ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪತಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೊದನಾಪುರ ಹೊರವಲಯದಲ್ಲಿ ರುದ್ರವ್ವ ಅಡಕಿ(55) ಅವರನ್ನು ಹತ್ಯೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿ ಹತ್ಯೆ ಮಾಡಿ ಪತಿ ಚನ್ನಬಸಪ್ಪ ಅಡಕಿ ಪೊಲೀಸರಿಗೆ ಶರಣಾಗಿದ್ದಾನೆ. ಸಂಗಪ್ಪ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ತವರು ಸೇರಿದ್ದರು. ಸಂಗಪ್ಪನೂ ಅಲ್ಲೇ ಬಂದು ನೆಲೆಸಿದ್ದ. ಮನೆಯಲ್ಲಿ ರುದ್ರವ್ವ ಮತ್ತು ಸಂಗಪ್ಪ ಜಗಳವಾಡಿದ್ದು, ಜಮೀನಿಗೆ ಹೋದಾಗ ಮಾರಕಾಸ್ತ್ರದಿಂದ ಥಳಿಸಿ ಪತ್ನಿ ಹತ್ಯೆ ಮಾಡಿದ್ದಾನೆ. ನಂತರ ದೊಡವಾಡ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.