alex Certify Netflix ಬಳಕೆದಾರರಿಗೆ ಬಿಗ್ ಶಾಕ್; ಪಾಸ್ವರ್ಡ್ ಹಂಚಿಕೊಂಡರೆ ಹೆಚ್ಚುವರಿ ಶುಲ್ಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Netflix ಬಳಕೆದಾರರಿಗೆ ಬಿಗ್ ಶಾಕ್; ಪಾಸ್ವರ್ಡ್ ಹಂಚಿಕೊಂಡರೆ ಹೆಚ್ಚುವರಿ ಶುಲ್ಕ

ಈವರೆಗೆ Netflix ಖಾತೆಯನ್ನು ಓರ್ವರು ತೆಗೆದುಕೊಂಡರೆ ಹಲವರು ಅದೇ ಪಾಸ್ವರ್ಡ್ ಬಳಸಿ ಬೇರೆ ಕಡೆಯೂ Netflix ಬಳಕೆ ಮಾಡಬಹುದಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಕಡಿವಾಣ ಬೀಳಲಿದೆ.

ಹೌದು, Netflix ಖಾತೆದಾರರು ತಮ್ಮ ಪಾಸ್ವರ್ಡ್ ಅನ್ನು ಸ್ನೇಹಿತರು ಅಥವಾ ಬಂಧುಗಳಿಗೆ ನೀಡಿ ಅವರುಗಳಿಗೂ ಉಚಿತವಾಗಿ ವೆಬ್ ಸೀರೀಸ್, ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದರೆ ಅಂತಹ ಖಾತೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲು Netflix ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ 2023 ರಿಂದ ಹೊಸ ಶುಲ್ಕ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದ್ದು, ಒಂದು ಸಮಾಧಾನಕರ ಸಂಗತಿ ಎಂದರೆ ಮೂಲ ಖಾತೆಗಿಂತ ಉಪ ಖಾತೆಗಳಿಗೆ ವಿಧಿಸುವ ಶುಲ್ಕ ಒಂದಷ್ಟು ಕಡಿಮೆಯಿರಲಿದೆ ಎನ್ನಲಾಗಿದೆ. ಆದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕುರಿತು Netflix ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...