ಸಿಕ್ಕಿಂನ ಈಕ್ಷಾ ಹಂಗ್ಮಾ 21 ವರ್ಷದ ಮಹಿಳಾ ಪೊಲೀಸ್ ಅಧಿಕಾರಿ, ಸೂಪರ್ ಮಾಡೆಲ್, ಬೈಕರ್ ಮತ್ತು ಬಾಕ್ಸರ್ ಹೀಗೆ ಬಹು ವಿಶೇಷತೆ ಹೊಂದಿದಾಕೆ. ಅವರು ಹಳ್ಳಿಯಿಂದ ಬಂದವರು, ಕ್ರೀಡೆಯತ್ತ ಆಸಕ್ತಿ ತೋರಿಸಿದ್ದರು. ಬಾಕ್ಸಿಂಗ್ ಕಲಿತ ಆಕೆ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸಿಕ್ಕಿಂ ಅನ್ನು ಪ್ರತಿನಿಧಿಸಿದ್ದಾರೆ.
ಬೈಕು ಸವಾರಿ ಮೇಲಿನ ಪ್ರೀತಿಯೂ ಸಹ ಅವರಿಗಿದ್ದು, ತಂದೆಯೇ ಕಲಿಯಲು ಪ್ರೋತ್ಸಾಹಿಸಿದ್ದಾರೆ. ಬಳಿಕ 2019ರಲ್ಲಿ ಅವರು ಸಿಕ್ಕಿಂ ಪೊಲೀಸ್ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ.
ಸಿಕ್ಕಿಂ ಸಣ್ಣ ರಾಜ್ಯವಾಗಿರುವುದರಿಂದ ಸರ್ಕಾರಿ ನೌಕರಿ ಪಡೆಯುವುದು ಕಷ್ಟಕರ ಎಂದು ಈಕ್ಷಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದರೆ ಆಕೆಗೆ ಇನ್ನೊಂದು ಕನಸಿತ್ತು. ವರ್ಷದ ಎಂಟಿವಿ ಸೂಪರ್ ಮಾಡೆಲ್ ಸ್ಪರ್ಧೆಗೆ ಹೋಗಲು ಬಯಸಿದ್ದರು. ತನ್ನ ಗೆಳೆಯರು ಮತ್ತು ಇಲಾಖೆಯ ಹಿರಿಯರಿಂದ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ ಅವರು ಎರಡನೇ ಸೀಸನ್ಗಾಗಿ ಆಡಿಷನ್ನಲ್ಲಿ ಪಾಲ್ಗೊಂಡರು. ಈಕ್ಷಾ ಅಲ್ಲಿಯೂ ಆಯ್ಕೆಯಾಗಿದ್ದರು. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಈಕ್ಷಾ ಸಾಧನೆ ಮೆಚ್ಚಿಕೊಂಡಿದ್ದಾರೆ.