ತುಮಕೂರು: ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಮೂರು ವರ್ಷದ ಮಗುವನ್ನು ಹಾರೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಬಳಿ ನಡೆದಿದೆ.
24 ವರ್ಷದ ಕವಿತಾ ಹಾಗೂ ಮೂರು ವರ್ಷದ ಮಗ ಜೀವನ್ ಹತ್ಯೆಯಾದವರು. ಕವಿತಾಳ ಪತಿ ಸ್ವಾಮಿ ಹಾರೆಯಿಂದ ಇಬ್ಬರನ್ನು ಹೊಡೆದು ಕೊಂದಿದ್ದಾನೆ.
ಆರೋಪಿಯನ್ನು ಹಿಡಿದ ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಚೇಳೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.