ನವದೆಹಲಿ: ಪ್ರವರ್ಧಮಾನಕ್ಕೆ ಬರುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಆಟೋಮೋಟಿವ್ ಪ್ರಪಂಚವನ್ನು ಆಕರ್ಷಿಸುತ್ತಿದೆ. ಇವುಗಳ ಸಾಲಿಗೆ ಇದೀಗ ಪಿಯುಗಿಯೋ ಕಿಸ್ಬೀ ಬ್ರ್ಯಾಂಡ್ ಬಹಳ ಸದ್ದು ಮಾಡುತ್ತಿದೆ.
ಬೌನ್ಸ್ ಇನ್ಫಿನಿಟಿ ಇ1 ಮತ್ತು ಅಥರ್ 450 ಎಕ್ಸ್ ಜೊತೆಗೆ ಈ ಬ್ರ್ಯಾಂಡ್ ಗುರುತಿಸಲಾಗಿದ್ದು, ಶೀಘ್ರವೇ ಭಾರತದಲ್ಲಿ ಇದು ಹಂಗಾಮಾ ಸೃಷ್ಟಿಸಲಿದೆ ಎನ್ನಲಾಗಿದೆ. ಇದನ್ನು ಇಲ್ಲಿ ಪರಿಚಯಿಸಲು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಅದ್ಹೇಗೆ ಅಂತೀರಾ ? ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಅಂಗಸಂಸ್ಥೆಯಾದ ಮಹೀಂದ್ರಾ ಟೂ ವೀಲರ್ಸ್ ಜನವರಿ 2015 ರಲ್ಲಿ ಪಿಯುಗಿಯೊ ಮೋಟಾರ್ ಸೈಕಲ್ನಲ್ಲಿ 51 ಪ್ರತಿಶತ ಈಕ್ವಿಟಿ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. 2019 ರಲ್ಲಿ, ಮಹೀಂದ್ರಾ ತನ್ನ ಮೊದಲ ಬ್ಯಾಚ್ ಇ-ಲುಡಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಿಯುಗಿಯೊಗೆ ರವಾನಿಸಿದೆ. ಇದು ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ.
ಈಗ ಮಹೀಂದ್ರಾ ಕಿಸ್ಬೀಯ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂಚೂಣಿಗೆ ತರಲು ಯೋಜನೆ ರೂಪಿಸಿದೆ. ಇದು ಮೂಲತಃ 50ಸಿಸಿ, ನಾಲ್ಕು-ಸ್ಟ್ರೋಕ್ ಸ್ಕೂಟರ್ ಆಗಿದ್ದು ಅದು 3.5 ಪಿಎಸ್ ಮತ್ತು 3.2ಎನ್ಎಂ ಅಭಿವೃದ್ಧಿಪಡಿಸುತ್ತದೆ. ಅದೇ ಚೌಕಟ್ಟಿನ ಆಧಾರದ ಮೇಲೆ ಕಿಸ್ಬಿಯ ಎಲೆಕ್ಟ್ರಿಕ್ ಆವೃತ್ತಿಯು ಬೌನ್ಸ್ ಇನ್ಫಿನಿಟಿ ಇ-1 ಗೆ ವಿರುದ್ಧವಾಗಿ ಅದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿರುವಂತೆ ತೋರುತ್ತಿದೆ.
ಮಹೀಂದ್ರಾ ಭಾರತದಲ್ಲಿ ಪಿಯುಗಿಯೊ ಬ್ರ್ಯಾಂಡ್ ಅನ್ನು ತಂದರೆ, ಈ ಇ-ಸ್ಕೂಟರ್ ಪ್ರೀಮಿಯಂ ಕೊಡುಗೆಯಾಗಿದೆ ಎಂದು ನಿರೀಕ್ಷಿಸಬಹುದು.