ಕಾಲ ಬದಲಾಗಿದೆ. 20 ವರ್ಷಕ್ಕೆ ಮದುವೆಯಾಗಿ ಸಂಸಾರದ ಹೊಣೆ ಹೊತ್ತು ಮಕ್ಕಳನ್ನು ನೋಡಿಕೊಳ್ಳುವ ಕಾಲ ಈಗಿಲ್ಲ. ಬಹುತೇಕರು 30ರ ಗಡಿ ದಾಟಿದ್ರೂ ಮದುವೆ ಬಗ್ಗೆ ಆಸಕ್ತಿ ತೋರಿಸುವುದಿಲ್ಲ. 35 ವರ್ಷವಾದ್ರೂ ಮದುವೆಯಾಗದೆ ಹೋದಲ್ಲಿ ಏನಾಗುತ್ತೆ ಎನ್ನುವ ಬಗ್ಗೆ ಹೊಸ ಸರ್ವೆಯೊಂದು ನಡೆದಿದೆ.
ಸರ್ವೆ ಪ್ರಕಾರ, 35 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತರು ಆ ನಂತ್ರ ಮದುವೆಯಾಗಲು ಆಸಕ್ತಿ ಹೊಂದಿರುವುದಿಲ್ಲವಂತೆ. ಮದುವೆಗಿಂತ ಏಕಾಂಗಿ ಜೀವನವನ್ನು ಹೆಚ್ಚು ಇಷ್ಟಪಡ್ತಾರಂತೆ. ಸರ್ವೆಯಲ್ಲಿ ಪಾಲ್ಗೊಂಡಿದ್ದ 35-40 ವರ್ಷದೊಳಗಿನ ಅವಿವಾಹಿತರು ಈ ಸಂಗತಿ ತಿಳಿಸಿದ್ದಾರೆ.
ಒಂದು ಮಿತಿ ದಾಟಿದ ನಂತ್ರ ಜನರು ಕಂಫರ್ಟ್ ಲೆವಲ್ ಗೆ ಬಂದು ಬಿಡ್ತಾರೆ. ಆ ಹಂತದಿಂದ ಮುಂದೆ ಹೋಗಲು ಇಷ್ಟಪಡುವುದಿಲ್ಲ. 35 ವರ್ಷಗಳವರೆಗೆ ಏಕಾಂಗಿಯಾಗಿ ಜೀವನ ನಡೆಸಿದ್ದವರಿಗೆ ಮದುವೆ ಬಂಧನದಂತೆ ಭಾಸವಾಗುತ್ತದೆ. ಯಾರ, ಯಾವುದೇ ಚಿಂತೆಯಿಲ್ಲದೆ ಬೇಕಾದಾಗ ಕೆಲಸ ಬಿಟ್ಟು, ಬೇಕಾದಂತೆ ಸುತ್ತಾಡಿ ಜೀವನ ನಡೆಸಿದವರಿಗೆ ಮದುವೆ ನಂತ್ರ ಪತಿ ಅಥವಾ ಪತ್ನಿ ಹೇಳಿದಂತೆ ನಡೆದುಕೊಳ್ಳುವುದು ಕಷ್ಟವಾಗುತ್ತದೆ.
35 ವರ್ಷದವರೆಗೆ ಆರಾಮವಾಗಿ ಜೀವನ ನಡೆಸಿದವರಿಗೆ ಆ ನಂತ್ರ ಬೇರೆಯವರ ಜೀವನಶೈಲಿ ಇಷ್ಟವಾಗುವುದಿಲ್ಲ. ದಂಪತಿ ಜಗಳವಾಡಿದ್ದನ್ನು ನೋಡಿರುತ್ತೀರಾ, ಮೋಸ ಮಾಡಿದ್ದನ್ನು ನೋಡಿರುತ್ತೀರಾ. ಆಗ ಅದೆಲ್ಲಕ್ಕಿಂತ ಏಕಾಂತ ಬೆಸ್ಟ್ ಎನ್ನಿಸಲು ಶುರುವಾಗುತ್ತದೆ.
ಈ ಹಂತದವರೆಗೆ ಒಂಟಿಯಾಗಿ ಸಂತೋಷ ಅನುಭವಿಸಿದವರಿಗೆ ಮದುವೆಯಾದ್ಮೇಲೆ ಇನ್ನಷ್ಟು ಸಂತೋಷ ಸಿಗಬಹುದು ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ. ಯಾವಾಗ ಯಾರ ಜೊತೆ ಬೇಕಾದ್ರೂ ಡೇಟ್ ಮಾಡುವ ಅವಕಾಶವೂ ಇರುವುದ್ರಿಂದ ಇಂಥ ಸುಂದರ ಜೀವನವನ್ನು ಮದುವೆ ಮೂಲಕ ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತದೆ ಸರ್ವೆ.