ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗವಾಗಿತ್ತು.
ರಂಗಭೂಮಿ, ಸಂಗೀತ ಮತ್ತು ಕಲೆಯಂತಹ ಕಲೆಗಳೊಂದಿಗೆ ನಿಯಮಿತವಾಗಿ ಸಂಬಂಧ ಹೊಂದಿರುವ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಜೀವನ ವಿಧಾನವೂ ಸುಧಾರಿಸುತ್ತದೆ ಎಂದು ಈ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹಿಂದೆ ನಡೆದ ಅಧ್ಯಯನವೊಂದರಲ್ಲಿ ಕಲೆಯಲ್ಲಿ ತೊಡಗಿರುವ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ, ಖಿನ್ನತೆ, ಬುದ್ಧಿಮಾಂದ್ಯತೆ, ದೀರ್ಘಕಾಲದ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗಿತ್ತು.
ಸಂಶೋಧಕರು 50 ವರ್ಷ ಮೇಲ್ಪಟ್ಟ 6 ಸಾವಿರಕ್ಕೂ ಹೆಚ್ಚು ಜನರನ್ನು ಈ ಸಂಶೋಧನೆಗೆ ಬಳಸಿಕೊಂಡಿದ್ದರು. ಕಲೆ, ನಾಟಕ, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ, ಕಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಜನರು ಇದ್ರಲ್ಲಿ ಸೇರಿದ್ದರು. ಇತರರಿಗೆ ಹೋಲಿಕೆ ಮಾಡಿದ್ರೆ ಇವ್ರ ಜೀವಿತಾವಧಿ ಶೇಕಡಾ 14ರಷ್ಟು ಹೆಚ್ಚಿತು.