ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಗುರುವಾರ ಹಾವು ಕಂಡು ಬಂದಿದ್ದು, ಸಾಮಾನ್ಯವಾಗಿ ಇದನ್ನು ಏಷ್ಯಾಟಿಕ್ ವಾಟರ್ ಸ್ನೇಕ್ ಎಂದು ಕರೆಯಲಾಗುತ್ತದೆ.
ಭದ್ರತಾ ಸಿಬ್ಬಂದಿ ಕಾವಲು ಕೊಠಡಿಯ ಬಳಿ ವಿಷಕಾರಿಯಲ್ಲದ ಈ ಹಾವನ್ನು ಕಂಡು ಕೂಡಲೇ ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಗೆ ಮಾಹಿತಿ ನೀಡಿದ್ದಾರೆ.
ಮರದ ಫಲಕಗಳ ನಡುವೆ ಆಶ್ರಯ ಪಡೆದಿದ್ದ ಹಾವನ್ನು ಎನ್‌ಜಿಒದ ಇಬ್ಬರು ಸದಸ್ಯರ ತಂಡ ರಕ್ಷಿಸಿದೆ. ಸರೋವರಗಳು, ನದಿಗಳು ಮತ್ತು ಕೊಳಗಳು, ಚರಂಡಿ, ಕೃಷಿ ಭೂಮಿಗಳು, ಬಾವಿಗಳು ಮುಂತಾದ ಜಲಮೂಲಗಳಲ್ಲಿ ಈ ಹಾವು ಪ್ರಧಾನವಾಗಿ ಕಂಡುಬರುತ್ತದೆ.