ಎಲೆವೇಟರ್ ಒಂದು ಅಸಮರ್ಪಕ ಕಾರ್ಯನಿರ್ವಹಣೆಯಿಂದ ವ್ಯಕ್ತಿಯೊಬ್ಬ ತಲೆಯನ್ನೇ ಕಳೆದುಕೊಳ್ಳುವ ಸಂದರ್ಭ ಎದುರಾಗಿತ್ತು. ಆತನ ಲಕ್ ಎಷ್ಟು ಚೆನ್ನಾಗಿತ್ತೆಂದರೆ ಕೂದಲೆಳೆ ಅಂತರದಲ್ಲಿ ಆತನ ತನ್ನ ತಲೆ ಉಳಿಸಿಕೊಂಡಿದ್ದಾನೆ.
ರಷ್ಯಾದ ಕ್ರಾಸ್ನೋಡರ್ ನಗರದ ಅಪಾರ್ಟ್ಮೆಂಟ್ ಬ್ಲಾಕ್ನಲ್ಲಿ ಈ ಘಟನೆ ನಡೆದಿದೆ. ಮೈ ಝುಮ್ಮೆನಿಸುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಲಿಫ್ಟ್ನಿಂದ ಹೊರಬರುತ್ತಿರುವುದು ಕಂಡುಬರುತ್ತದೆ. ಅಲ್ಲಿಯವರೆಗೆ, ಲಿಫ್ಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತೋರುತ್ತದೆ. ಆದರೆ ಇನ್ನೊಬ್ಬ ವ್ಯಕ್ತಿ ಲಿಫ್ಟ್ ಒಳಗೆ ಹೆಜ್ಜೆ ಹಾಕಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಇನ್ನೂ ಬಾಗಿಲಿನ ನಡುವೆ ಇರುವಾಗಲೇ ಲಿಫ್ಟ್ ವೇಗವಾಗಿ ಕೆಳಕ್ಕೆ ಚಲಿಸಿತು.
ಆ ವ್ಯಕ್ತಿ ಲಿಫ್ಟ್ ಒಳಗೆ ಹೋಗುತ್ತಿರುವಾಗ ತನ್ನ ಫೋನ್ ಅನ್ನು ನೋಡುತ್ತಿರುವುದು ಸಿಸಿ ಟಿವಿ ಫೂಟೇಜ್ನಲ್ಲಿ ಕಾಣಿಸುತ್ತದೆ. ಆತ ಅವಸರದಿಂದ ಹಿಂದಕ್ಕೆ ಚಲಿಸಿದ್ದು ತನ್ನ ತಲೆಯನ್ನು ಉಳಿಸಿಕೊಂಡಿದ್ದಾನೆ. ನೆಟ್ಟಿಗರು ಇದನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ.