ಬೆಂಗಳೂರು: ಓಲಾ, ಊಬರ್ ಕಂಪನಿಗಳ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ್ದ ಸಭೆ ಅಂತ್ಯಗೊಂಡಿದ್ದು, ಕಿ.ಮೀ.30 ರೂಪಾಯಿಯಂತೆ ಹಣ ಪಡೆಯಬೇಕು ಎಂಬ ನಿಯಮಕ್ಕೆ ಓಲಾ, ಊಬರ್ ಸಂಸ್ಥೆಗಳು ಒಪ್ಪಿವೆ ಎಂದು ಇಲಾಖೆ ಆಯುಕ್ತ ಟಿ.ಹೆಚ್.ಎಂ.ಕುಮಾರ್ ತಿಳಿಸಿದ್ದಾರೆ.
ಓಲಾ, ಊಬರ್ ಕಂಪನಿಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತರು, ಇನ್ನು ಮುಂದೆ ಜಿ ಎಸ್ ಟಿ ಹಾಗೂ ಆಟೋ ಬಾಡಿಗೆ ಸೇರಿ ಕೀ.ಮೀಗೆ 30 ರೂಪಾಯಿ ಪಡೆಯಬೇಕು ಎಂಬ ಸೂಚನೆಗೆ ಓಲಾ, ಊಬರ್ ಸಂಸ್ಥೆಗಳು ಒಪ್ಪಿವೆ. ಹಾಗಾಗಿ ಅದಕ್ಕಿಂತ ಹೆಚ್ಚಿಗೆ ಹಣ ವಸೂಲಿಗೆ ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾದರೆ ಅದು ಓಲಾ, ಊಬರ್ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಲಿದೆ ಹೊರತು ಆಟೋ ಚಾಲಕರ ಮೇಲೆ ಅಲ್ಲ. ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.