ಬೆಂಗಳೂರಿನಲ್ಲಿ ನಿತ್ಯ ಜನರ ಜೀವನಾಡಿ ಬಿಎಂಟಿಸಿ. ಲಕ್ಷಾಂತರ ಜನ ಬಿಎಂಟಿಸಿ ನಂಬಿಕೊಂಡೇ ಪ್ರಯಾಣ ಮಾಡ್ತಾ ಇದ್ದಾರೆ. ಮೆಟ್ರೋ ಇದ್ದರೂ ಕೂಡ ಬಿಎಂಟಿಸಿ ಬಸ್ ಗೆ ನೆಚ್ಚಿಕೊಂಡವರು ಅನೇಕರು. ಇದೀಗ ಈ ಬಿಎಂಟಿಸಿ ಬಸ್ ಗಳು ಇನ್ಮುಂದೆ ಪರಿಸರ ಸ್ನೇಹಿಯಾಗಲಿವೆ.
ಹೌದು, ಈಗಾಗಲೇ ಎಲೆಕ್ಟ್ರಿಕ್ ಬಸ್ ಗಳು ನಗರದಲ್ಲಿ ಸಂಚಾರ ಮಾಡ್ತಾ ಇವೆ. ಸುಮಾರು 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಸಂಚಾರ ಮಾಡ್ತಾ ಇದ್ದು, ಈ ವರ್ಷದಾಂತ್ಯಕ್ಕೆ ಇನ್ನೂ 1000 ಸಾವಿರ ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಸೋ ಪ್ಲಾನ್ ಮಾಡಿಕೊಂಡಿದೆ ಸರ್ಕಾರ. ಆದರೆ ಇದೀಗ ಆತಂಕವೊಂದು ಎದುರಾಗಿದೆ. ಈ ಬಸ್ ಗಳ ಮೂಲಕ ಖಾಸಗೀಕರಣ ಆಗಲಿದೆ ಅನ್ನೋದು ನೌಕರರ ವಾದ.
ಸರ್ಕಾರ ಈ ಬಸ್ ಗಳನ್ನು ರಸ್ತೆಗಿಳಿಸೋ ಮೂಲಕ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ನೌಕರರು ಬೀದಿಗೆ ಬೀಳ್ತಾರೆ ಎಂದು ಹೇಳುತ್ತಿದ್ದಾರೆ. ಈ ಬಸ್ ಗಳಿಗೆ ನಮ್ಮ ನೌಕರರನ್ನೇ ಬಳಸಿಕೊಳ್ಳಿ ಅನ್ನೋದು ಅವರ ವಾದವಾಗಿದೆ.