ಡ್ರಗ್ಸ್ ಅನ್ನು ಸಿರಿಂಜ್ ಮೂಲಕ ದೇಹಕ್ಕೆ ಚುಚ್ಚಿಕೊಳ್ತಾ ಇದ್ದ ಮೂವರನ್ನು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಲಾಗಿದೆ. ಈ ಮೂವರು ಡ್ರಗ್ಸ್ ಚುಚ್ಚಿಕೊಳ್ತಾ ಇರೋ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಗಮನಿಸಿದ ಪೊಲೀಸರು ಕೂಡಲೇ ಅವರನ್ನು ಬಂಧಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಶ್ರೀನಗರದ ನೂರ್‌ಬಾಗ್ ಗ್ರಾಮದಲ್ಲಿ ಸೆರೆಹಿಡಿದಿರುವ ದೃಶ್ಯ ಇದು. ಮೂವರು ಯುವಕರು ತಮ್ಮ ದೇಹಕ್ಕೆ ಸೂಜಿಯ ಮೂಲಕ ಮಾದಕ ದ್ರವ್ಯವನ್ನು ಚುಚ್ಚಿಕೊಳ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು.
ಶ್ರೀನಗರದ ನೂರ್‌ಬಾಗ್ ಆಸ್ಪತ್ರೆಯ ಹೊರಭಾಗದಲ್ಲಿ ಕೆಲವು ಅಪರಿಚಿತರು ಒಬ್ಬರಿಗೊಬ್ಬರು ಡ್ರಗ್ಸ್ ಚುಚ್ಚಿಕೊಳ್ತಿದ್ದಾರೆ. ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಿ ಅಂತಾ ಬಳಕೆದಾರರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದರು.
ಕೂಡಲೇ ಇದಕ್ಕೆ ಸ್ಪಂದಿಸಿದ ಶ್ರೀನಗರ ಪೊಲೀಸರು, ತನಿಖೆಗೆ ಮುಂದಾಗಿದ್ದಾರೆ. ಮೂವರನ್ನು ಪತ್ತೆ ಮಾಡಿ ಡಿ-ಅಡಿಕ್ಷನ್ ಸೆಂಟರ್‌ಗೆ ಕಳುಹಿಸಿದ್ದಾರೆ. ಇವರು ಡಿ-ಅಡಿಕ್ಷನ್ ಕೇಂದ್ರದಲ್ಲಿ ಕೊಡುವ ಔಷಧಗಳನ್ನೇ ಪ್ರಯೋಗಿಸುತ್ತಿದ್ದರು ಎನ್ನಲಾಗ್ತಿದೆ. ಅದನ್ನು ಮೌಖಿಕವಾಗಿ ಸೇವನೆ ಮಾಡುವ ಬದಲು ರಕ್ತನಾಳಗಳಿಗೆ ಚುಚ್ಚಿಕೊಳ್ಳುತ್ತಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.