ನಮ್ಮ ನಡುವೆ ಹೊಸ ಪ್ರಯೋಗಗಳು ನಡೆಯುವುದನ್ನು ಕಾಣುತ್ತಿರುತ್ತೇವೆ, ಇದೀಗ ದೆಹಲಿಯ ಕಾರ್ಖಾನೆಯೊಂದು ಸಿಗರೇಟ್ ತುಂಡು ಬಳಸಿ ಆಟಿಕೆ ತಯಾರಿಸಿ ಗಮನ ಸೆಳೆಯುತ್ತಿದೆ.
ಲಕ್ಷಾಂತರ ಜನರು ಸಿಗರೇಟ್ ಉರಿಸಿ ಕೊನೆಯ ಭಾಗ ಎಸೆದಿರುತ್ತಾರೆ. ಅದನ್ನು ಬೀದಿಗಳಿಂದ ಸಂಗ್ರಹಿಸಿದ ನಂತರ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಬ್ಲೀಚ್ ಮಾಡಲಾಗುತ್ತದೆ. ಆಟಿಕೆಗಳು ಮತ್ತು ದಿಂಬುಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗಾಗಿ ಮರುಸಂಸ್ಕರಿಸುವುದು ಉದ್ಯಮಿ ನಮನ್ ಗುಪ್ತಾ ಅವರ ಕಲ್ಪನೆಯ ಕೂಸು.
ನಾವು ಪ್ರತಿ ದಿನ 1,000 ಕಿಲೋಗ್ರಾಂಗಳಷ್ಟು ಸಂಸ್ಕರಣೆ ಮಾಡುತ್ತಿದ್ದೇವೆ… ವಾರ್ಷಿಕವಾಗಿ ನಾವು ಲಕ್ಷಾಂತರ ಸಿಗರೇಟ್ ತುಂಡುಗಳನ್ನು ಮರುಬಳಕೆ ಮಾಡಲು ಸಮರ್ಥರಾಗಿದ್ದೇವೆ ಎಂದು ಅವರು ನ್ಯೂಸ್ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ.
ಕೆಲಸಗಾರರು ಬಟ್ಗಳ ಹೊರ ಪದರ ಮತ್ತು ತಂಬಾಕನ್ನು ಪ್ರತ್ಯೇಕಿಸುತ್ತಾರೆ, ಇವುಗಳನ್ನು ಕ್ರಮವಾಗಿ ಮರುಬಳಕೆಯ ಕಾಗದ ಮತ್ತು ಕಾಂಪೋಸ್ಟ್ ಪುಡಿಯಾಗಿ ಪರಿವತಿರ್ಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 267 ಮಿಲಿಯನ್ ಜನರು, ಭಾರತದ ವಯಸ್ಕ ಜನಸಂಖ್ಯೆಯ ಸುಮಾರು 30 ಪ್ರತಿಶತದಷ್ಟು ಜನರು ತಂಬಾಕು ಬಳಸುತ್ತಾರೆ ಬಳಿಕ ಬೀದಿಗಳಲ್ಲಿ ಅದರ ತ್ಯಾಜ್ಯವನ್ನು ಹಾಕುತ್ತಾರೆ.
ನಾವು ಈ ಕೆಲಸ ಮಾಡುವುದರಿಂದ ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಎಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಪೂನಂ ಹೇಳಿದರು.