ಬ್ಯಾಂಕ್ ವಹಿವಾಟು ನಡೆಸುವ ಅದರಲ್ಲೂ ಸಾಲ ತೆಗೆದುಕೊಳ್ಳಬಯಸುವ ಎಲ್ಲರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿರಲಿ ಎಂದೇ ಆಶಿಸುತ್ತಾರೆ.
ಏಕೆಂದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾದಷ್ಟೂ ಸಾಲ ಸಿಗುವ ಸಾಧ್ಯತೆ ಕೂಡ ಕಡಿಮೆಯಾಗುತ್ತ ಹೋಗುತ್ತದೆ. ಅದಕ್ಕಾಗಿ ಈ ಮೂರು ಅಂಶಗಳ ಮೇಲೆ ನೀವು ಗಮನವಿಡಬೇಕು.
ಮೊದಲನೆಯದಾಗಿ ಕಂತು ಪಾವತಿಸುವಲ್ಲಿ ತಡ ಮಾಡಬಾರದು ಅಥವಾ ತಪ್ಪಿಸಬಾರದು. ಎರಡನೆಯದಾಗಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಅಕೌಂಟ್‌ಗಳನ್ನು ಹೊಂದಬಾರದು. ಮೂರನೆಯದಾಗಿ ಕ್ರೆಡಿಟ್ ಯುಟಿಲೈಸೇಷನ್ ರೇಶ್ಯು ಕಡಿಮೆ ಇಟ್ಟುಕೊಳ್ಳಬೇಕು.