alex Certify Viral Video: ಗಲ್ಲಿ ಕ್ರಿಕೆಟ್ ನಲ್ಲಿ ಸಂಸ್ಕೃತ ಕಾಮೆಂಟರಿ….! ನೆಟ್ಟಿಗರ ಗಮನ ಸೆಳೆದ ಇಂಟ್ರಸ್ಟಿಂಗ್ ಮ್ಯಾಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಗಲ್ಲಿ ಕ್ರಿಕೆಟ್ ನಲ್ಲಿ ಸಂಸ್ಕೃತ ಕಾಮೆಂಟರಿ….! ನೆಟ್ಟಿಗರ ಗಮನ ಸೆಳೆದ ಇಂಟ್ರಸ್ಟಿಂಗ್ ಮ್ಯಾಚ್

ಕ್ರಿಕೆಟ್ ಪಂದ್ಯ ಯಾವತ್ತಾದರೂ ಕಾಮೆಂಟರಿ ಇಲ್ಲದೇ ನೋಡಲು ಬಯಸುತ್ತಿರಾ ? ತುಂಬಾ ಜನರ ಉತ್ತರ ಇಲ್ಲ ಎಂದೇ ಆಗಿರುತ್ತೆ. ಯಾಕಂದ್ರೆ ಕಾಮೆಂಟರಿ ಇದ್ದರೇನೇ ಆಟ ಇನ್ನಷ್ಟು ಇಂಟ್ರಸ್ಟಿಂಗ್ ಆಗಿರುತ್ತೆ. ಇನ್ನೂ ಕ್ರಿಕೆಟ್ ಆಸಕ್ತರಂತೂ ಆಟ ನೋಡುವುದಷ್ಟೆ ಅಲ್ಲ ಕಾಮೆಂಟರಿ ಕೇಳಿ ಎಂಜಾಯ್ ಮಾಡ್ತಿರ್ತಾರೆ. ಕೆಲವರು ಕಾಮೆಂಟರಿ ಮಾಡೇ ಫೇಮಸ್ ಆಗಿದ್ದೂ ಇದೆ.

ಕೆಲವರು ಹಾಸ್ಯ ಮಿಶ್ರಿತ ಕಾಮೆಂಟರಿ ಮಾಡ್ತಾರೆ, ಇನ್ನು ಕೆಲವರು ಈ ಆಟ ಇನ್ನಷ್ಟು ಕುತೂಹಲ ಹುಟ್ಟುವಂತೆ ಕಾಮೆಂಟ್ ಮಾಡ್ತಿರ್ತಾರೆ. ಒಟ್ಟಿನಲ್ಲಿ ಕುತೂಹಲ ಆಟದ ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟರಿ ಇದ್ದುಬಿಟ್ಟರೆ ಕ್ರಿಕೆಟ್ ಪ್ರಿಯರಿಗೆ ಅದೇ ದೊಡ್ಡ ಹಬ್ಬ.

ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಕ್ತಿಯೊಬ್ಬರು ಕ್ರಿಕೆಟ್ ಕಾಮೆಂಟರಿ ಮಾಡುವ ವಿಡಿಯೋ ಒಂದು ವೈರಲ್ ಆಗಿದೆ. ಇವರು ಕಾಮೆಂಟರಿ ಮಾಡ್ತಿರೋದು ಗಲ್ಲಿ ಕ್ರಿಕೆಟ್ ಬಗ್ಗೆ. ಈ ಕಾಮೆಂಟರಿ ವಿಶೇಷತೆ ಏನಂದ್ರೆ, ಆ ವ್ಯಕ್ತಿ ಇಂಗ್ಲಿಷ್, ಹಿಂದಿ, ಕನ್ನಡ ಇದರಲ್ಲಿ ಕಾಮೆಂಟರಿ ಮಾಡ್ತಿಲ್ಲ ಬದಲಾಗಿ ಸಂಸ್ಕೃತದಲ್ಲಿ ಮಾಡ್ತಿದ್ದಾರೆ. ಇಷ್ಟು ಸರಳವಾಗಿ ಸಂಸ್ಕೃತ ಮಾತನಾಡುವುದಲ್ಲದೇ ಅದೇ ಭಾಷೆಯಲ್ಲಿ ಕಾಮೆಂಟರಿ ಮಾಡ್ತಿರೋದನ್ನ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಿ ನಾರಾಯಣ ಬಿ.ಎಸ್. ಎಂಬ ಹೆಸರಿನ ಟ್ವಿಟರ್ ಬಳಕೆದಾರರು “ಸಂಸ್ಕೃತ ಮತ್ತು ಕ್ರಿಕೆಟ್” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ, ಇದು 133,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6,600 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ಇದನ್ನೂ ನೋಡಿದ ನೆಟ್ಟಿಗರು “ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಈ ಸಂಸ್ಕೃತ ಕ್ರಿಕೆಟ್ ಕಾಮೆಂಟರಿ ಬೇಕು….” ಎಂದು ಬೇಡಿಕೆಯನ್ನು ಇಟ್ಟಿದ್ದಾರೆ.

ಕ್ರಿಕೆಟ್ ಕಾಮೆಂಟರಿ ಹಿಂದಿ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ದೀರ್ಘಕಾಲದವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಆದರೆ ಗಲ್ಲಿ ಕ್ರಿಕೆಟ್‌ಗೆ ಸಂಸ್ಕೃತ ಕ್ರಿಕೆಟ್ ವಿವರಣೆಯನ್ನು ಹೊಂದಿರುವುದು ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...