![](https://kannadadunia.com/wp-content/uploads/2022/10/milk.jpg)
ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ಮಹತ್ವವಿದೆ. ದಿನಕ್ಕನುಗುಣವಾಗಿ ದೇವರ ಪೂಜೆ ಮಾಡಲಾಗುತ್ತದೆ. ಭಾನುವಾರದ ದಿನವನ್ನು ಸೂರ್ಯನಿಗೆ ಅರ್ಪಿಸಲಾಗಿದೆ. ಸೂರ್ಯನ ಆರಾಧನೆ, ಪೂಜೆ ಮಾಡಿದ್ರೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಸೂರ್ಯದೇವ ಯಶಸ್ಸು ಹಾಗೂ ವೈಭವದ ಸಂಕೇತ. ಹಾಗಾಗಿ ಆತನ ಪೂಜೆ ಮಾಡಿದ್ರೆ ಯಶಸ್ಸಿನ ಜೊತೆಗೆ ಧನ, ಧಾನ್ಯ, ಸುಖ, ಸಮೃದ್ಧಿ ಸಿಗಲಿದೆ.
ಆರ್ಥಿಕ ಸಂಕಷ್ಟದಿಂದ ನೀವು ಬಳಲುತ್ತಿದ್ದು, ಅದ್ರಿಂದ ಮುಕ್ತಿ ಬಯಸಿದ್ದರೆ ಭಾನುವಾರ ಅವಶ್ಯವಾಗಿ ಸೂರ್ಯದೇವನ ಆರಾಧನೆ ಮಾಡಿ. ಆರ್ಥಿಕ ವೃದ್ಧಿ ಜೊತೆಗೆ ಸುಖ, ಶಾಂತಿ ಬಯಸುವವರು ಭಾನುವಾರ ಈ ಕೆಲಸವನ್ನು ಮಾಡಬೇಕಾಗುತ್ತದೆ.
ಉಪಾಯ : ಭಾನುವಾರ ರಾತ್ರಿ ಒಂದು ಗ್ಲಾಸ್ ನಲ್ಲಿ ಹಾಲನ್ನು ಹಾಕಿ ನಿಮ್ಮ ತಲೆ ದಿಂಬಿನ ಬಳಿಯಿಟ್ಟು ಮಲಗಿ. ರಾತ್ರಿ ಕೈ ತಗುಲಿ ಗ್ಲಾಸಿನಲ್ಲಿರುವ ಹಾಲು ಚೆಲ್ಲದಂತೆ ಎಚ್ಚರ ವಹಿಸಬೇಕಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಈ ಹಾಲನ್ನು ಅಕೇಶಿಯ ಗಿಡದ ಕೆಳಗೆ ಹಾಕಿ. ಪ್ರತಿ ಭಾನುವಾರ ಈ ಕೆಲಸ ಮಾಡಿದ್ರೆ ಆರ್ಥಿಕ ಸಂಕಷ್ಟ ದೂರವಾಗುತ್ತದೆ.