ನಾರ್ವೇಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಭಾರತದ ಸೌಂದರ್ಯದಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ ಮತ್ತು ದೇಶಾದ್ಯಂತದ ಇರುವ ಅದ್ಬುತ ಸ್ಥಳಗಳನ್ನು ಒಳಗೊಂಡಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಸೆಪ್ಟೆಂಬರ್ 29 ರಂದು, ಅವರು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೋಟವನ್ನು ಹಂಚಿಕೊಂಡಿದ್ದು, ಅದು ಡ್ರೋನ್ನಿಂದ ಕ್ಲಿಕ್ ಮಾಡಲಾಗಿದೆ.
ಎರಿಕ್ ಸೋಲ್ಹೈಮ್ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಡ್ರೋನ್ ನೋಟವು ಕಲ್ಲಿನ ಭೂಪ್ರದೇಶ, ಕಡು ನೀಲಿ ಆಕಾಶ ಮತ್ತು ಅಂಕುಡೊಂಕಾದ ರಸ್ತೆಯನ್ನು ಸೆರೆಹಿಡಿದುಕೊಟ್ಟಿದೆ. ಬಂಡೆಗಳ ನಡುವೆ ಹರಿಯುವ ನದಿಯನ್ನೂ ಅದು ಸೆರೆಹಿಡಿದಿದೆ. ಇವುಗಳ ಸೊಗಸು ಅಭೂತಪೂರ್ವವಾಗಿದೆ.
“ಮಂಗಳದಲ್ಲಿ ಸವಾರಿ. ಸ್ಪಿತಿ ಹಿಮಾಚಲ ಪ್ರದೇಶ. ಇನ್ಕ್ರೆಡಿಬಲ್ ಇಂಡಿಯಾ” ಎಂದು ಸೋಲ್ಹೈಮ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಂತ್ರಮುಗ್ಧರಾಗಿದ್ದು, ತಮ್ಮ ಅನಿಸಿಕೆಯನ್ನು ಕಾಮೆಂಟ್ ವಿಭಾಗದಲ್ಲಿ ಹಾಕಿದ್ದಾರೆ. ಪೇಂಟಿಂಗ್ ರೀತಿ ಕಾಣುತ್ತದೆ, ಈ ಭೂ ಭಾಗ ಮಾಂತ್ರಿಕವಾಗಿವೆ ಎಂಬಿತ್ಯಾದಿ ಅಭಿಪ್ರಾಯ ಬಂದಿವೆ.