ರೈಲು ಹಳಿಯ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋದ ಯುವಕನೊಬ್ಬ ತನ್ನ ಕಾಲು ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ವಿವರ: ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ 23 ವರ್ಷದ ಸಾಬಣ್ಣ ಎಂಬ ಯುವಕ ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೇ ವಾಸವಾಗಿದ್ದರು.
ಭಾನುವಾರದಂದು ಸಾಬಣ್ಣ ಮೊಬೈಲ್ ನೋಡಿಕೊಂಡು ರೈಲು ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಅವರ ಕೈಯಿಂದ ಮೊಬೈಲ್ ಜಾರಿ ಹಳಿಯ ಮೇಲೆ ಬಿದ್ದಿದೆ.
ಇದನ್ನು ತೆಗೆದುಕೊಳ್ಳಲು ಸಾಬಣ್ಣ ಹಳಿಗೆ ಇಳಿದಿದ್ದು, ಈ ವೇಳೆ ಅತಿ ವೇಗವಾಗಿ ಬಂದ ರೈಲು ಅವರ ಕಾಲಿನ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.