ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಹೆಚ್ಚಿಸಿದೆ. ಬೇಹುಗಾರಿಕಾ ಏಜೆನ್ಸಿಗಳ ಮಾಹಿತಿಯನ್ನು ಆಧರಿಸಿ ಭದ್ರತೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮುಕೇಶ್ ಅಂಬಾನಿ ಅವರಿಗೆ ಈವರೆಗೆ Z ಶ್ರೇಣಿ ಭದ್ರತೆಯನ್ನು ನೀಡಲಾಗುತ್ತಿದ್ದು, ಈ ಹಿಂದೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಅವರಿಗೆ Z+ಭದ್ರತೆಯನ್ನು ನೀಡಲಾಗುತ್ತಿದ್ದು, ಇದು 55 ಮಂದಿಯ ತಂಡವನ್ನು ಹೊಂದಿದೆ.
ಐದು ಶ್ರೇಣಿಗಳಾದ X, Y, Z, Z+, SPG ಭದ್ರತೆಯನ್ನು ಅಗತ್ಯಾನುಸಾರ ವಿಐಪಿ ಹಾಗೂ ವಿವಿಐಪಿಗಳಿಗೆ, ಖ್ಯಾತ ಅಥ್ಲೆಟ್, ಸಿನಿ ತಾರೆಯರು ಮತ್ತು ರಾಜಕೀಯ ನಾಯಕರುಗಳಿಗೆ ಒದಗಿಸಲಾಗುತ್ತದೆ. Z+ಶ್ರೇಣಿಯಲ್ಲಿ 55 ಮಂದಿ ಭದ್ರತಾ ಸಿಬ್ಬಂದಿ ಇರಲಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿ ಎನ್ ಎಸ್ ಜಿ ಕಮಾಂಡೋಗಳು ಇರಲಿದ್ದಾರೆ.