alex Certify ಜಾರ್ಖಂಡ್‌ನಲ್ಲಿ ದಾಖಲೆ ಸೃಷ್ಟಿಸಿದೆ ಈ ಕಂಪನಿ, 1 ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರ್ಖಂಡ್‌ನಲ್ಲಿ ದಾಖಲೆ ಸೃಷ್ಟಿಸಿದೆ ಈ ಕಂಪನಿ, 1 ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳ ಮಾರಾಟ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಜಾರ್ಖಂಡ್ ರಾಜ್ಯದಲ್ಲಿ ಒಂದು ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2001ರಲ್ಲಿ ಆಕ್ಟಿವಾ ಸ್ಕೂಟರ್‌ನೊಂದಿಗೆ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಜರ್ನಿ ಪ್ರಾರಂಭವಾಗಿತ್ತು.

2017ರ ವೇಳೆಗೆ ರಾಜ್ಯದಲ್ಲಿ ಐದು ಲಕ್ಷ ಗ್ರಾಹಕರನ್ನು ಕಂಪನಿ ಸಂಪಾದಿಸಿತ್ತು. ಮುಂದಿನ ಅರ್ಧದಷ್ಟನ್ನು ಕೇವಲ ಐದು ವರ್ಷಗಳಲ್ಲೇ ಗಳಿಸಿದ್ದು ವಿಶೇಷ.  ಜಾರ್ಖಂಡ್‌ನಲ್ಲಿ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಡೀಲರ್‌ಶಿಪ್‌ಗಳು, ಅಧಿಕೃತ ಸೇವಾ ಕೇಂದ್ರಗಳು ಮತ್ತು ಉತ್ತಮ ಡೀಲ್ ಔಟ್‌ಲೆಟ್‌ಗಳು ಸೇರಿದಂತೆ 160 ಟಚ್‌ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ.

ಈ ಟಚ್‌ಪಾಯಿಂಟ್‌ಗಳು ರಾಜ್ಯದಲ್ಲಿನ ಗ್ರಾಹಕರಿಗೆ ಚಿಲ್ಲರೆ ಮತ್ತು ಸೇವಾ ಅನುಭವವನ್ನು ನೀಡುತ್ತವೆ. ಹೋಂಡಾ ಆಕ್ಟಿವಾ 6G ಮತ್ತು ಶೈನ್ ಕಮ್ಯೂಟರ್ ಬೈಕ್, ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ಮಾರಾಟವಾಗ್ತಿದೆ. ಕಂಪನಿಯ ಸ್ಕೂಟರ್‌ಗಳು ಜಾರ್ಖಂಡ್ನ ದ್ವಿಚಕ್ರ ವಾಹನ ಸವಾರರನ್ನು ಖುಷಿಪಡಿಸುತ್ತಿವೆ ಎಂದು ಹೋಂಡಾ ಮೋಟಾರ್‌ಸೈಕಲ್ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದ್ದಾರೆ.

ಕಂಪನಿಯು ಎಂಟು ಮೋಟಾರ್‌ಸೈಕಲ್‌ಗಳನ್ನು ಹೊರತುಪಡಿಸಿ ನಾಲ್ಕು ಸ್ಕೂಟರ್‌ಗಳನ್ನು ರಾಜ್ಯದಲ್ಲಿ ಮಾರಾಟ ಮಾಡುತ್ತಿದೆ. Activa 6G, Activa 125, Dio & Grazia 125 ಇವುಗಳಲ್ಲಿ ಸೇರಿವೆ. ಆದರೆ ಮೋಟಾರ್‌ಸೈಕಲ್ ಪಟ್ಟಿಯಲ್ಲಿ 110cc (CD 110 Dream & Livo), 125cc (SP125 & Shine), 160cc (X-Blade-2) ಮತ್ತು 0ccorn-0 (Hornet 2.0 & CB200X) ಇತರ ವಿಶೇಷ ಆವೃತ್ತಿಯ ಮಾದರಿಗಳು ಲಭ್ಯವಿವೆ.

ಸಂಸ್ಥೆಯ ವಿಶ್ವಾಸಾರ್ಹ ಗುಣಮಟ್ಟ ಮತ್ತು ಸೇವೆಯ ಭರವಸೆಯನ್ನು ಇಟ್ಟುಕೊಂಡು ಗ್ರಾಹಕರು ಉತ್ತಮ ರೆಸ್ಪಾನ್ಸ್‌ ನೀಡುತ್ತಿದ್ದಾರೆ. ನಮ್ಮ ಮಾನದಂಡಗಳನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ ಎಂದು ಕಂಪನಿ ಭರವಸೆ ನೀಡಿದೆ. ನೆಟ್‌ವರ್ಕ್ ಉಪಸ್ಥಿತಿ ಮತ್ತು ಹೊಸ ಕೊಡುಗೆಗಳ ವಿಸ್ತರಣೆ ಬಗ್ಗೆ ಗಮನಹರಿಸುವುದಾಗಿಯೂ ಕಂಪನಿಯ ಮುಖ್ಯಸ್ಥ ಒಗಾಟಾ ಭರವಸೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...