
ಯೋಗಾಸಕ್ತರು, ಯೋಗದ ಅನಿವಾರ್ಯತೆ ಇರುವವರು ಮನೆಯ ಸೌಕರ್ಯಗಳಲ್ಲಿ, ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ನೋಡಿರಬಹುದು. ಆದರೆ, ಬಾಹ್ಯಾಕಾಶದಲ್ಲಿ ಯೋಗ ಮಾಡುವುದನ್ನು ಎಂದಾದರೂ ನೋಡಿದ್ದೀರಾ?
ಸಮಂತಾ ಕ್ರಿಸ್ಟೋಫೊರೆಟ್ಟಿ ಎಂಬ ಗಗನಯಾತ್ರಿ ಬಾಹ್ಯಾಕಾಶದಲ್ಲಿ ಕೆಲವು ಯೋಗ ಭಂಗಿಗಳನ್ನು ಪ್ರದರ್ಶಿಸಿ, ಟ್ವಿಟರ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸಮಂತಾ ಕ್ರಿಸ್ಟೋಫೊರೆಟ್ಟಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿ.
ಅವರು ಝೀರೋ ಗ್ರಾವಿಟಿಯಲ್ಲಿ ಕೆಲವು ಯೋಗ ಭಂಗಿ ಮಾಡುವುದನ್ನು ಕಾಣಬಹುದು. ಈ ಹಿಂದೆ ಅವರು ಯೋಗ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಕ್ಲಿಪ್ ನೋಡಿದ ನಂತರ ನೆಟ್ಟಿಗರು ಸಂತೋಷಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
https://twitter.com/ACCA501/status/1574800983149912064?ref_src=twsrc%5Etfw%7Ctwcamp%5Etweetembed%7Ctwterm%5E1574800983149912064%7Ctwgr%5Efbd0e72fa4abc7ecb758e0e6adab2b310e9bde78%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fastronaut-does-yoga-in-space-yes-you-read-that-right-watch-video-2005731-2022-09-28