ಸಪ್ನಾ ಚೌಧರಿ, ಹಿಂದಿ ಬಿಗ್ಬಾಗ್ ಖ್ಯಾತಿಯ ಮತ್ತು ಹರಿಯಾಣದ ಪ್ರಸಿದ್ಧ ನೃತ್ಯಗಾರ್ತಿ. ಇನ್ಸ್ಟಾಗ್ರಾಮ್ನಲ್ಲಿ ಏನಿಲ್ಲ ಅಂದರೂ 5 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಆಗಾಗ ಸುದ್ದಿಯಲ್ಲಿರುವ ಸಪ್ನಾ, ತಮ್ಮ ಡಾನ್ಸ್ಗೆನೇ ಫೇಮಸ್ ಆದವರು. ಒಂದು ಬಾರಿ ಸ್ಟೇಜ್ ಹತ್ತಿ ಸ್ಟೆಪ್ ಹಾಕೋದಕ್ಕೆ ಶುರು ಮಾಡಿದ್ರೆ ಸಾಕು ಸಪ್ನಾ ಚೌಧರಿಗೆ ಫಿದಾ ಆಗದವರೇ ಯಾರೂ ಇಲ್ಲ.
ನೋಡ್ಬೇಕು ಕಣ್ರೀ, ಸಪ್ನಾ ಚೌಧರಿ ಮಾಡೋ ಡಾನ್ಸ್ನ್ನ , ಹರಿಯಾಣ ಜನರ ಪಾಲಿಗೆ ಈಕೆನೇ ಸ್ವರ್ಗದಿಂದ ಧರೆಗಿಳಿದ ರಂಭೆ, ಊರ್ವಶಿ, ಮೇನಕೆ. ಇದೇ ಸಪ್ನಾ ಚೌಧರಿ ಇತ್ತಿಚೆಗೆ ಕಾರ್ಯಕ್ರಮವೊಂದಲ್ಲಿ `ಪಾನಿ ಛಲ್ಕೆ` ( ನೀರು ಚಿಮ್ಮಿದ್ದಾಗ) ಅನ್ನೊ ಹಾಡಿಗೆ ಡಾನ್ಸ್ ಮಾಡಿದ್ದಾರೆ.
ಈ ಹಾಡನ್ನ ಗಾಯಕ ಮನಿಶ್ ಶರ್ಮಾ ಅವರು ಹಾಡಿದ್ಧಾರೆ. ಪಟಿಯಾಲಾ ಸೂಟ್ ಹಾಕಿಕೊಂಡು, ತಲೆ ಮೇಲೆ ಸೆರಗನ್ನ ಹೊದ್ದಿಕೊಂಡು ಪಕ್ಕಾ ಹರಿಯಾಣಾ ಸ್ಟೈಲ್ನಲ್ಲಿ ಸೊಂಟ ಬಳಕಿಸಿ ಕುಣಿಯೋದನ್ನ ನೋಡಬಹುದು.
ಅದೇ ಕಾರ್ಯಕ್ರಮದಲ್ಲಿ ಇದ್ದ ಅಭಿಮಾನಿಯೊಬ್ಬ ಸಪ್ನಾ ಚೌಧರಿ ಈ ಡಾನ್ಸ್ನ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗೆ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನ 77 ಲಕ್ಷ ಜನ ನೋಡಿ ಇಷ್ಟಪಟ್ಟಿದ್ದಾರೆ. ಅಷ್ಟೆ ಅಲ್ಲ 54 ಲಕ್ಷ ಜನ ಈ ವಿಡಿಯೋವನ್ನ ಇಷ್ಟ ಪಟ್ಟಿದ್ದಾರೆ. ಇದಿಷ್ಟು ಸಾಕನಿಸುತ್ತೆ ಸಪ್ನಾ ಚೌಧರಿಯ ಗುಂಗು ಇಲ್ಲಿನ ಜನರಿಗೆ ಯಾವ ಮಟ್ಟದಲ್ಲಿ ಇದೆ. ಅಂತ.