alex Certify ತನ್ನ ಚಿಕ್ಕ ಮಗು ಬಿಟ್ಟು ‘ಬಿಗ್ ಬಾಸ್’ ಗೆ ಬಂದ್ರು ಈ ನಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಚಿಕ್ಕ ಮಗು ಬಿಟ್ಟು ‘ಬಿಗ್ ಬಾಸ್’ ಗೆ ಬಂದ್ರು ಈ ನಟಿ..!

ಕಿರುತೆರೆಯ ಮೂಲಕ ಗುರುತಿಸಿಕೊಂಡಿದ್ದ ನಟಿ ಮಯೂರಿ, ಕಿರುತೆರೆ ನಂತರ ಹಿರಿತೆರೆಗೂ ಬಂದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮದುವೆ ಬಳಿಕ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದ ಈ ನಟಿ, ಇದೀಗ ಬಿಗ್ ಬಾಸ್​ ಕನ್ನಡ ಸೀಸನ್ 9ಕ್ಕೆ ಬಂದಿದ್ದಾರೆ. ಇವರಿಗೆ ಒಂದೂವರೆ ವರ್ಷದ ಮಗುವಿದ್ದು ಅದನ್ನು ಬಿಟ್ಟು ಶೋಗೆ ಬಂದಿದ್ದಾರೆ.

ಇನ್ನು ಈ ನಟಿ ಬಿಗ್ ಬಾಸ್ ಗೆ ಹೋಗ್ತಾರೆ ಅಂತ ಪ್ರೇಕ್ಷಕರು ಅಂದಾಜು ಮಾಡಿದ್ದರು. ಅದರಂತೆ ಇದೀಗ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಸುದೀಪ್ ಜೊತೆ ವೇದಿಕೆಯಲ್ಲಿ ಮಾತನಾಡಿದ ಅವರು, ನನಗೆ ನನ್ನ ಕುಟುಂಬ ಅಂದರೆ ಪ್ರಾಣ. ಅವರೇ ನನ್ನ ಪ್ರಪಂಚ. ನನ್ನ ಮಗುವಿಗೆ ಈಗ ಒಂದೂವರೆ ವರ್ಷ. ಅವನನ್ನು ಬಿಟ್ಟು ಹೇಗೆ ಇರುತ್ತೀನೋ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಅಶ್ವಿನಿ ನಕ್ಷತ್ರ ಧಾರವಾಹಿ‌ ಮೂಲಕ ಹೆಚ್ಚು ಖ್ಯಾತಿ ಪಡೆದ ಮಯೂರಿ, ನಂತರ ಹಿರಿತೆರೆಗೂ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೇಶನದ ಇಷ್ಟಕಾಮ್ಯ, ಶಶಾಂಕ್ ನಿರ್ದೇಶನದ ಕೃಷ್ಣ ಲೀಲಾ ಸಿನಿಮಾದಲ್ಲಿ ನಟಿಸಿದರು. ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ತಂಗಿಯಾಗಿ ಅವರು ನಟಿಸಿದ್ದಾರೆ. ಇನ್ನು ಶಿವರಾಜ್ ಕುಮಾರ್ ಸೇರಿದಂತೆ ಹಲವು ಜನರ ಜೊತೆ ನಟಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...