ಈಗ ಎಲ್ಲರದ್ದೂ ಬ್ಯುಸಿ ಲೈಫ್. ಪುರುಷರಿಗಂತೂ ವಿಶೇಷವಾಗಿ ಅನೇಕ ಜವಾಬ್ಧಾರಿಗಳಿರುತ್ತವೆ. ಕೆಲಸದ ಜೊತೆಗೆ ಕುಟುಂಬದ ಖರ್ಚು ವೆಚ್ಚಗಳನ್ನೂ ನಿಭಾಯಿಸುವುದು ಸುಲಭವಲ್ಲ. ಶಿಕ್ಷಣ ಮತ್ತು ವೃತ್ತಿಯಲ್ಲಿ ಎದುರಾಗುವ ಸವಾಲುಗಳನ್ನೆಲ್ಲ ಎದುರಿಸಲು ಮಾನಸಿಕ ದೃಢತೆಯ ಜೊತೆಗೆ ದೈಹಿಕ ಕ್ಷಮತೆಯೂ ಬೇಕು.
ಒತ್ತಡದಿಂದಲೇ ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಬೇಕು. ಆಗ ಮಾತ್ರ ಆರೋಗ್ಯಕರ ಮತ್ತು ಬಲಶಾಲಿಯಾಗಬಹುದು. ಪುರುಷರು ಕಡ್ಡಾಯವಾಗಿ ಸೇವಿಸಬೇಕಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ.
ಹಾಲು: ಪುರುಷರು ಬಾಲ್ಯದಿಂದ ವೃದ್ಧಾಪ್ಯದವರೆಗೆ ಹಾಲು ಮತ್ತು ಅದರಿಂದ ತಯಾರಿಸಿದ ವಸ್ತುಗಳನ್ನು ಸೇವಿಸಬೇಕು. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್, ಅಮೈನೋ ಆಮ್ಲಗಳು ಮತ್ತು ಲುಟೀನ್‌ಗಳು ಸಮೃದ್ಧವಾಗಿವೆ. ಇದು ಪುರುಷರ ದೇಹವನ್ನು ಬಲಪಡಿಸುತ್ತದೆ.
ಮೊಟ್ಟೆ: ಪುರುಷರು ಪ್ರತಿದಿನ ಮೊಟ್ಟೆ ಸೇವನೆ ಮಾಡುವುದು ಸೂಕ್ತ. ಮೊಟ್ಟೆ ಸೂಪರ್‌ಫುಡ್‌ಗಿಂತ ಕಡಿಮೆಯೇನಿಲ್ಲ. ಇದನ್ನು ಬೆಳಗಿನ ಉಪಾಹಾರಕ್ಕೆ ಸೇವಿಸುವುದು ಸೂಕ್ತ. ಮೊಟ್ಟೆಯಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಲುಟೀನ್ ಇದೆ. ಇದು ದೇಹಕ್ಕೆ ಬಹಳ ಮುಖ್ಯವಾಗಿದೆ.
ಧಾನ್ಯಗಳು: ಪುರುಷರ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಧಾನ್ಯಗಳು ನಮ್ಮ ಅಡುಗೆ ಮನೆಯಲ್ಲೇ ಇವೆ. ಇವುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ನೈಸರ್ಗಿಕ ಕೊಬ್ಬು ಹೇರಳವಾಗಿದೆ. ಇದು ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಸಿರು ತರಕಾರಿಗಳು: ಆರೋಗ್ಯ ತಜ್ಞರು ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಲು ಶಿಫಾರಸು ಮಾಡುತ್ತಾರೆ. ಇದು ಪುರುಷರಿಗೆ ಮಾತ್ರವಲ್ಲ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಪಾಲಕ್, ಕೋಸುಗಡ್ಡೆ ಮತ್ತು ಎಲೆಕೋಸನ್ನು ಸೇವಿಸುವುದು ಉತ್ತಮ.
ಡ್ರೈ ಫ್ರೂಟ್ಸ್: ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಪ್ರಯೋಜನವನ್ನು ನೀಡುತ್ತದೆ. ನೀವು ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ಸೇವಿಸಿದರೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಕಡಿಮೆಯಾಗುತ್ತದೆ.