alex Certify ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ ನಲ್ಲಿ 5ಸ್ಟಾರ್ ರೇಟಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ ನಲ್ಲಿ 5ಸ್ಟಾರ್ ರೇಟಿಂಗ್…!

ಬೆಂಗಳೂರು ಸಿಟಿ, ಗಾರ್ಡನ್ ಸಿಟಿ ಅಂತಾನೇ ಒಂದು ಕಾಲದಲ್ಲಿ ಫೇಮಸ್ ಆಗಿತ್ತು. ಆದರೆ ಈಗ ಅದಕ್ಕಿಂತ ಹೆಚ್ಚಾಗಿ ಟ್ರಾಫಿಕ್ ಹಾಗೂ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳಿಗೆ ಫೇಮಸ್ ಆಗಿದೆ. ಈಗ ಗೂಗಲ್ ಕೂಡಾ ಇದೇ ಗುಂಡಿಯಿಂದ ತುಂಬಿರೋ ರಸ್ತೆಗೆ 5 ಸ್ಟಾರ್ ರೇಟಿಂಗ್ ಕೊಟ್ಟಿದೆ.

ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಓಡಾಡುವಾಗ ಎಷ್ಟೋ ಜನ ಕೈ-ಕಾಲು ಮುರಿದುಕೊಂಡಿದ್ದಾರೆ. ಎಷ್ಟೋ ಬೈಕ್ ಸವಾರರನ್ನ ಈ ಗುಂಡಿಗಳು ಬಲಿ ಪಡೆದಿವೆ. ಇದೇ ಗುಂಡಿಯಲ್ಲಿ ಒಂದಾಗಿರುವ ಬೆಳ್ಳಂದೂರು ಗುಂಡಿ ಐತಿಹಾಸಿಕ ಪಟ್ಟಿಗೆ ಸೇರಿದೆ.

ಬೆಂಗಳೂರಿನಲ್ಲಿ ಇರುವ ರಸ್ತೆ ಗುಂಡಿಗಳನ್ನ ಲೆಕ್ಕ ಹಾಕುವುದು ಅಸಾಧ್ಯ. ಆಗಾಗ ಈ ಗುಂಡಿಗಳನ್ನ ಮುಚ್ಚಲಾಗುತ್ತಿದ್ದರೂ ಕಳಪೆ ಕಾಮಗಾರಿಯಿಂದಾಗಿ, ರಸ್ತೆಯಲ್ಲಿ ಮತ್ತೆ ಮತ್ತೆ ಗುಂಡಿಗಳು ಬೀಳುತ್ತಲೇ ಇವೆ. ಇದು ಬೆಂಗಳೂರಿನಲ್ಲಿ ಕಾಮನ್. ಆದರೆ ಈಗ ಬೆಳ್ಳಂದೂರು ಗುಂಡಿ ಗೂಗಲ್‌ನಲ್ಲಿ5 ಸ್ಟಾರ್ ಗಿಟ್ಟಿಸಿಕೊಂಡಿರುವುದು ನೋಡಿ ಸಿಲಿಕಾನ್ ಸಿಟಿ ಜನ ಶಾಕ್ ಆಗಿದ್ದಾರೆ.

ನಿಮೊ ತಾಯ್ ಎಂಬ ಟ್ವಿಟ್ಟರ್ ಬಳಕೆದಾರರು ಬೆಂಗಳೂರಿನ ಗುಂಡಿಗೆ ಗೂಗಲ್‍ನಲ್ಲಿ 5 ಸ್ಟಾರ್ ಸಿಕ್ಕ ಮಾಹಿತಿ ಬಗ್ಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಗುಂಡಿ ಗೂಗಲ್‍ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಬರೆದುಕೊಂಡಿದ್ದಾರೆ.

ಗೂಗಲ್ ನಲ್ಲಿ 5 ಸ್ಟಾರ್ ಪಡೆದ ಗುಂಡಿಗಳಿಗೆ ಜನ ಕಾಮೆಂಟ್ ಹಾಕಿದ್ದಾರೆ. ಈ ರೀತಿಯ ರಸ್ತೆ ಗುಂಡಿಗಳನ್ನು ನಾವು ಹಿಂದೆ ಎಂದೂ ಕಂಡಿಲ್ಲ. ಮುಂದೆ ಕಾಣುತ್ತೀವೋ ಇಲ್ಲ ಗೊತ್ತಿಲ್ಲ. ಅದಕ್ಕೆ ಅಲ್ಲಿಗೆ ಭೇಟಿ ನೀಡಬೇಕು. ಖಂಡಿತವಾಗಿಯೂ ಭೇಟಿ ಕೊಡಲೇಬೇಕಾದ ಅತ್ಯುತ್ತಮ ಗುಂಡಿ ಎಂದು ಬಳಕೆದಾರರು ಹೇಳಿದ್ದಾರೆ.

ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವ ಬೆಳ್ಳಂದೂರು ಗುಂಡಿ ಗೂಗಲ್‍ನಲ್ಲಿ 5 ಸ್ಟಾರ್ ಗಿಟ್ಟಿಸಿಕೊಂಡಿದೆ. ಬಳಕೆದಾರರು ಗುಂಡಿಗೆ 5 ಸ್ಟಾರ್ ಕೊಟ್ಟಿದ್ದಾರೆ. ನಾವು ಈ ರೀತಿ ಗುಂಡಿಯನ್ನೂ ನೋಡೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

— Nimo Tai (@Cryptic_Miind) September 20, 2022

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vyhrajte vo varení so skvelými tipmi a trikmi pre domáce kuchárov. Nájdite užitočné rady a informácie pre pestovanie vlastných plodín vo vašej záhrade. Získajte užitočné nápady a návody na zlepšenie vášho každodenného života. Linguine v krémovej omáčke so štipľavou salámou Kreatívne zložky pre dokonalé dezerty Svadobný cviklový šalát Pečená kuracia rolka v rúre Nakladané ovocie: Astrologický výhled na 16. října: Býk - Obrovská snídane obalované kotlety