alex Certify BREAKING NEWS: ವಿಧಾನಪರಿಷತ್ ನಲ್ಲಿ ಹೈಡ್ರಾಮಾ; ಕುರ್ಚಿ ಏರಿ ನಿಂತ ಶಾಸಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಿಧಾನಪರಿಷತ್ ನಲ್ಲಿ ಹೈಡ್ರಾಮಾ; ಕುರ್ಚಿ ಏರಿ ನಿಂತ ಶಾಸಕ….!

ವಿಧಾನ ಪರಿಷತ್ತಿನಲ್ಲಿ ಇಂದು PayCM ಪೋಸ್ಟರ್ ವಿಚಾರ ಪ್ರತಿಧ್ವನಿಸಿದ್ದು ಹೈಡ್ರಾಮಾವೇ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರುಗಳು ಪರಸ್ಪರ ವಿರುದ್ಧದ ಆರೋಪಗಳ ಪೋಸ್ಟರ್ ಹಿಡಿದಿದ್ದು, ಸದಸ್ಯರೊಬ್ಬರು ಕುರ್ಚಿ ಏರಿ ನಿಂತಿದ್ದಾರೆ.

ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಕಚೇರಿ ಸಿಬ್ಬಂದಿಯನ್ನು ಪೊಲೀಸರು ಬನ್ನಿಸಿರುವುದು ಪಕ್ಷದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಪೋಸ್ಟರ್ ಹಿಡಿದೇ ಸದನಕ್ಕೆ ಅವರು ಆಗಮಿಸಿದ್ದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಸಹ ಪೋಸ್ಟರ್ ಪ್ರದರ್ಶಿಸಿದ್ದು, ಮಾತಿನ ಚಕಮಕಿಗೆ ಕಾರಣವಾಯಿತು. ಒಂದು ಹಂತದಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಸದನದಲ್ಲಿಯೇ ಕುರ್ಚಿ ಏರಿ ನಿಂತಿದ್ದರು. ಬಳಿಕ ಸದನವನ್ನು 3 ಗಂಟೆಗೆ ಮುಂದೂಡಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...