alex Certify ಹೋಟೆಲ್ ನಲ್ಲಿ ಲಾಂಗ್ ಝಳಪಿಸಿದ ಪುಂಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್ ನಲ್ಲಿ ಲಾಂಗ್ ಝಳಪಿಸಿದ ಪುಂಡರು

 

ಹೋಟೆಲ್ ಗೆ ಊಟಕ್ಕಾಗಿ ಬಂದಿದ್ದ ಪುಂಡರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದು ಮಚ್ಚು ಝಳಪಿಸಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದ್ದು, ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಜಗನ್ಮೋಹನ ಅರಮನೆ ಸಮೀಪದ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಈ ಪುಂಡರು ಮೊದಲಿಗೆ ಗ್ರಾಹಕರೊಬ್ಬರ ಜೇಬಿಗೆ ಕೈ ಹಾಕಿ ಹಣ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದ ಶುರುವಾಗಿದ್ದು ಹೋಟೆಲ್ ಮಾಲೀಕರು ಮಧ್ಯಪ್ರವೇಶಿಸಿದ್ದಾರೆ.

ಕೂಡಲೇ ಈ ಪುಂಡರು ಫೋನ್ ಮಾಡಿ ಮತ್ತಷ್ಟು ಜನರನ್ನು ಕರೆಸಿಕೊಂಡಿದ್ದು, ಮಾಲೀಕನಿಗೆ ಥಳಿಸಿ ಮಚ್ಚು ತೋರಿಸಲಾಗಿದೆ. ಈ ಸಂಬಂಧ ದೇವರಾಜ ಠಾಣೆಗೆ ದೂರು ನೀಡಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಾರಿಯಾಗಿರುವವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...