ಐಕಾನಿಕ್ ಕಯಾನಿ ಬೇಕರಿ ತಮ್ಮ ಉತ್ಪನ್ನಗಳನ್ನು ವಿಶಿಷ್ಟವಾದ ಕೇಕ್ ತಯಾರಿಸಲು ಬಳಸುತ್ತಿದ್ದು, ಪುಣೆ ಜಿಲ್ಲೆಯ ಪುರಂದರ ತೆಹಸಿಲ್ನಲ್ಲಿ ಕೆಂಪು ಪೇರಲ ಹಣ್ಣನ್ನು ಬೆಳೆಯುತ್ತಿರುವ ರೆೈತರನ್ನು ಹುರಿದುಂಬಿಸಿದೆ.
ರತ್ನದಿಪ ಪೇರಲೆ ಎಂಬ ಹೆಸರಿನ ಹಣ್ಣಿನ ತಳಿಯನ್ನು ಮಹಾರಾಷ್ಟ್ರದ ಪುರಂದರ ತೆಹಸಿಲ್ನಲ್ಲಿ ಸಾಂಪ್ರದಾಯಿಕವಾಗಿ ರೈತರು ಬೆಳೆಯುತ್ತಾರೆ. ಅದರ ಹಿತವಾದ ರುಚಿ ಮತ್ತು ಒಳಗಿನ ಗಾಢ ಗುಲಾಬಿ ತಿರುಳಿನ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
‘ಪುರಂದರ ಕೇಕ್’ ಎಂಬ ಬ್ರಾಂಡ್ನೊಂದಿಗೆ ವಿಶಿಷ್ಟವಾದ ಮೊಟ್ಟೆ ರಹಿತ ಪೇರಲೆ ತಯಾರಿಕೆಯನ್ನು ಪರಿಚಯಿಸುತ್ತಿದೆ. ಕಳೆದ ತಿಂಗಳಿನಿಂದ ತಯಾರಿಸಲು ಆರಂಭಿಸಿದ ಈ ಕೇಕ್ ಗೆ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬೇಕರಿಯ ಮಾಲೀಕರು ಹೇಳಿದ್ದಾರೆ.
“ಪುರಂದರ ಹೆೈಲ್ಯಾಂಡ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ಸ್” ಕಂಪನಿಯಿಂದ ತಯಾರಿಸಲ್ಪಟ್ಟ ಕೆಂಪು ಪೇರಲೆ ಬ್ರೆಡ್ ಸ್ಪ್ರೆಡ್ ಅನ್ನು ಬಳಸಿ ಕೇಕ್ ತಯಾರಿಸಲಾಗುತ್ತದೆ, ಅವರು ಕೃಷಿ ಮತ್ತು ಸಂಬಂಧಿತ ಅಭ್ಯಾಸಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ ಎಂದು ಕಂಪನಿಯ ಅಧ್ಯಕ್ಷರಾದ ರೋಹನ್ ಉರ್ಸಲ್ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಬೆಳೆಯುವ ಅಂಜೂರ, ಸೀತಾಫಲ ಮತ್ತು ಕೆಂಪು ಪೇರಲೆಯನ್ನು ವಿಶ್ವ ಮಾರುಕಟ್ಟೆಗೆ ಕೊಂಡೊಯ್ಯುವುದು ಪಿಎಚ್ಎಫ್ಪಿಸಿ ಸ್ಥಾಪನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.