ರಷ್ಯಾ ಮತ್ತು ಉಕ್ರೇನ್ ಯುದ್ಧ ನಡೆಯುತ್ತಿರುವ ನಡುವೆ ಯುಎಫ್ಓ ಸುದ್ದಿಮಾಡಿದೆ. ಉಕ್ರೇನ್ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಹಯೋಗದೊಂದಿಗೆ ಕೈವ್ನ ಮುಖ್ಯ ಖಗೋಳ ವೀಕ್ಷಣಾಲಯವು ಬಿಡುಗಡೆ ಮಾಡಿದ ಇತ್ತೀಚಿನ ಪ್ರಕಟಣೆಯ ಪ್ರಕಾರ, ತಜ್ಞರು ಗುರುತಿಸಲಾಗದ ಹಾರುವ ವಸ್ತುಗಳ (ಯುಎಫ್ಒ)ಗಳನ್ನು ಗಮನಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿನ ಪೆಂಟಗನ್ ಬಹಳ ಹಿಂದೆಯೇ ಕೆಲವು ಯುಎಫ್ಒ ಗಳು ವಿದೇಶಿ ಮಿಲಿಟರಿಗಳಿಂದ, ವಿಶೇಷವಾಗಿ ಚೀನಾ ಮತ್ತು ರಷ್ಯಾದಿಂದ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವಾಗಿರಬಹುದು ಎಂದು ಸುಳಿವು ನೀಡಿದೆ.
“ನಾವು ಎಲ್ಲೆಡೆ ಗಮನಿಸುತ್ತಿದ್ದೇವೆ” ಎಂದು ಸಂಶೋಧಕರು ಹೇಳಿದ್ದು, “ಸ್ಪಷ್ಟವಾಗಿಲ್ಲದ ಗಮನಾರ್ಹ ಸಂಖ್ಯೆಯ ವಸ್ತುಗಳನ್ನು ನಾವು ಗಮನಿಸುತ್ತೇವೆ ಎಂದಿದ್ದಾರೆ.
ಮುಖ್ಯ ಖಗೋಳ ವೀಕ್ಷಣಾಲಯ ಮತ್ತು ಕೈವ್ನ ದಕ್ಷಿಣದಲ್ಲಿರುವ ವಿನಾರಿವ್ಕಾ ಎಂಬ ಹಳ್ಳಿಯ ಡೇಟಾವನ್ನು ಬಳಸಿಕೊಂಡು ಘಟನೆಗಳನ್ನು ಗಮನಿಸಲಾಗಿದೆ.
ಸಂಶೋಧಕರು ತಾವು ಕಂಡ ವಿದ್ಯಮಾನವನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಕಾಸ್ಮಿಕ್ಸ್ ಮತ್ತು ಫ್ಯಾಂಟಮ್ಸ್ ಎಂದು ಕರೆದಿದ್ದಾರೆ. “ಕಾಸ್ಮಿಕ್ಸ್ ಪ್ರಕಾಶಮಾನವಾದ ವಸ್ತುಗಳು, ಆಕಾಶದ ಹಿನ್ನೆಲೆಗಿಂತ ಪ್ರಕಾಶಮಾನವಾಗಿದೆ. ನಾವು ಈ ದೊಡ್ಡ ಗಾತ್ರದ ಹಾರುವ ಪಕ್ಷಿಗಳಾದ ಫಾಲ್ಕನ್, ಹದ್ದು ಎಂದು ಕರೆಯುತ್ತೇವೆ. ಫ್ಯಾಂಟಮ್ಗಳು ಡಾರ್ಕ್ ಆಬ್ಜೆಕ್ಟ್ಗಳಾಗಿವೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.