ಜುಟ್ಟು ಹಿಡಿದು ಸಾರ್ವಜನಿಕವಾಗಿ ಜಗಳ ಸಾಮಾನ್ಯವಾಗಿದ್ದ ಕಾಲವಿತ್ತು. ಅದರಲ್ಲೂ ಕುಡಿಯುವ ನೀರು ವಿಷಯದಲ್ಲಿ ಇದು ಕಾಮನ್. ಆದರೆ ಇತ್ತೀಚೆಗೆ ಅಂತಹ ಪ್ರಸಂಗಗಳು ಬಲು ಅಪರೂಪ ಎಂದೇ ಹೇಳಬಹುದು.
ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನಾಸಿಕ್ ಬಳಿಯ ಪಿಂಪಲ್ಗಾಂವ್ ಟೋಲ್ ಬೂತ್ನಲ್ಲಿ ಮಹಿಳಾ ಪ್ರಯಾಣಿಕರು ಮತ್ತು ಟೋಲ್ನ ಮಹಿಳಾ ಉದ್ಯೋಗಿ ನಡುವೆ ಮಾರಾಮಾರಿ ನಡೆದಿದೆ.
ಸೆಪ್ಟೆಂಬರ್ 14 ರಂದು ಟೋಲ್ ಪ್ಲಾಜಾದಲ್ಲಿ ಟೋಲ್ ಪಾವತಿಗೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವೀಡಿಯೊದಲ್ಲಿ, ಇಬ್ಬರು ಮಹಿಳೆಯರು ಪರಸ್ಪರ ತಳ್ಳಾಡುವ ಪರಸ್ಪರ ಜುಟ್ಟು ಹಿಡಿದು ಜಗ್ಗಾಡುವುದು, ಹೊಡೆಯುವ ಮತ್ತು ಎಳೆಯುತ್ತಿರುವುದನ್ನು ಕಾಣಬಹುದು.
ಸಣ್ಣ ಕಾರಣಕ್ಕಾಗಿ ಪರಸ್ಪರ ಜಗಳವಾಡುವುದು ಮತ್ತು ನಿಂದನೆ ಮಾಡುವುದನ್ನು ಸಹ ಕಾಣಬಹುದು. ಹಲವಾರು ವೀಕ್ಷಕರು ಮತ್ತು ಉದ್ಯೋಗಿಗಳು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಂತೆ ಅವರಿಬ್ಬರ ಬಡಿದಾಟವು ಹಲವಾರು ನಿಮಿಷಗಳವರೆಗೆ ನಡೆಯುತ್ತದೆ. ಅನೇಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸಂಪೂರ್ಣ ಜಗಳವನ್ನು ರೆಕಾರ್ಡ್ ಮಾಡುವುದನ್ನು ಸಹ ಕಾಣಬಹುದು.
ಸಿಆರ್ಪಿಎಫ್ ಅಧಿಕಾರಿಯಾಗಿರುವ ಮಹಿಳೆಯ ಪತಿ ಟೋಲ್ ಬೂತ್ ಮಹಿಳಾ ಉದ್ಯೋಗಿಯೊಂದಿಗೆ ಜಗಳವಾಡುತ್ತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಜಗಳಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.