ಭಾನುವಾರ ‘ನಿಧಿ’ ಮತ್ತು ‘ಬ್ಲೌಸ್’ ಎಂಬ ಹೆಸರನ್ನು ಉಲ್ಲೇಖಿಸುವ ಹಲವಾರು ಟ್ವೀಟ್ಗಳು ಟ್ವಿಟರ್ನಲ್ಲಿ ಟಾಪ್ ಟ್ರೆಂಡಿಂಗ್ ವಿಷಯಗಳಲ್ಲಿ ಒಂದಾಗಿತ್ತು.
ದೆಹಲಿ ಮೂಲದ ಯೂಟ್ಯೂಬರ್ ಮತ್ತು ಜ್ಯೋತಿಷಿ ನಿಧಿ ಚೌಧರಿ ಅವರ ಬಟ್ಟೆಯ ವಿಚಾರದಲ್ಲಿ ಒಂದು ವರ್ಗ ಟ್ರೋಲ್ ಮಾಡುವಲ್ಲಿ ನಿರತವಾಗಿತ್ತು.
ಸೀರೆಯುಟ್ಟಿದ್ದ ನಿಧಿ ಬ್ಲೌಸ್ ಹಾಕಿರಲಿಲ್ಲ. ಇದು ಅನೇಕರಿಗೆ ಸಿಟ್ಟು ತರಿಸಿತ್ತು. ಟ್ವಿಟರ್ನಲ್ಲಿ 14.1 ಕೆ ಫಾಲೋಯರ್ಗಳನ್ನು ಹೊಂದಿರುವ ಜ್ಯೋತಿಷಿ, ವಕೀಲೆ, ಸೋಷಿಯಲ್ ಮೀಡಿಯ ಇನ್ಫ್ಲುಯೆನ್ಸರ್ ಫ್ಯಾಷನ್ ಸ್ಟೈಲಿಸ್ಟ್ ಎಂದು ಕರೆಸಿಕೊಂಡಿದ್ದಾರೆ.
ಇತ್ತೀಚೆಗೆ, ಅವರು ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಮನೆ ಕೆಲಸದವರನ್ನು ರ್ದುಬಳಕೆ ಮಾಡಿಕೊಳ್ಳಬೇಡಿ ಮತ್ತು ಯಾವಾಗಲೂ ಆರ್ಥಿಕ ಹಿಂದುಳಿದವರಿಗೆ ಸಹಾಯ ಮಾಡುವಂತೆ ಸಲಹೆ ನೀಡಿದ್ದರು.
ಅವರು ನೀಲಿ ಸೀರೆ ಉಟ್ಟಿದ್ದು, ಬೆಳ್ಳಿ ಆಭರಣ, ರುದ್ರಾಕ್ಷಿ ಮತ್ತು ಕಪ್ಪು ಬಿಂದಿಯನ್ನು ಇಟ್ಟಿದ್ದರು. ಬ್ಲೌಸ್ ಧರಿಸಿಲ್ಲ ಎಂದು ಟ್ರೋಲ್ ಮಾಡಿದವರು ಬ್ಲೌಸ್ ಖರೀದಿಸಲು ಹಣವನ್ನು ಕಳುಹಿಸಲು ಸಹ ಮುಂದಾದರು.
ನೀವು ಈಗ ಬ್ಲೌಸ್ ಖರೀದಿಸಲು ಸಾಧ್ಯವಾಗದ ಬಡ ಮಹಿಳೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನನಗೆ ನೀಡಿ, ಬ್ಲೌಸ್ ಖರೀದಿಸಲು ಸ್ವಲ್ಪ ಹಣವನ್ನು ವರ್ಗಾಯಿಸುತ್ತೇನೆ ಎಂದು ಕಾಲೆಳೆದಿದ್ದಾರೆ. ಕೆಲವರು ಈಕೆಗೆ 500 ರೂ. ನೀಡಿ ಎಂದು ಗೇಲಿ ಮಾಡಿದ್ದಾರೆ. ಇನ್ನು ಕೆಲವರು ನಿಧಿ ಅವರನ್ನು ಸಮರ್ಥಿಸಿದ್ದು, ಅದೂ ಕೂಡಾ ಒಂದು ಸ್ಟೈಲ್. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.